ಮೂಡುಬಿದಿರೆ : ಶ್ರೀ ಕ್ಷೇತ್ರ ಕರಿಂಜೆ ಶ್ರೀ ಲಕ್ಷ್ಮೀನಾರಾಯಣ ವೀರಾಂಜನೇಯ ಸ್ವಾಮೀ ಕ್ಷೇತ್ರದ ನೂತನ ಗರ್ಭಗುಡಿಯಲ್ಲಿ ಶ್ರೀ ದೇವರ ಪುನಃ ಪ್ರತಿಷ್ಠೆ ಶುಕ್ರವಾರ ಬೆಳಗ್ಗೆ ನಡೆಯಿತು. ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಉಪಸ್ಥಿತರಿದ್ದರು. ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಾರೂರು ಖಂಡಿಗ ವೇ|ಮೂ| ರಾಮದಾಸ ಆಸ್ರಣ್ಣರ ಪ್ರಧಾನ ಆಚಾರ್ಯತ್ವದಲ್ಲಿ ವಿಠ್ಠಲ ಭಟ್ ನಂದಳಿಕೆ ಹಾಗೂ ವೈದಿಕರಿಂದ ಪ್ರತಿಷ್ಠೆ ಬಳಿಕ ಕಲಶಾಭಿಷೇಕ, ಅಲಂಕಾರ ಪೂಜೆಯಾಗಿ ಮಹಾಪೂಜೆ ಜರಗಿತು.
ಪೂರ್ವಭಾವಿಯಾಗಿ ಪ್ರತಿಷ್ಠಾ ಹೋಮ, ಪ್ರಧಾನ ಹೋಮಗಳು, ಸುಕೃತ ಹೋಮ, ಚಂಡಿಕಾ ಮಹಾಯಾಗ, ನಾಮತ್ರಯ ಮಂತ್ರ ಹೋಮ, ಭಾಗೈಕ ಮತ್ಸ್ಯಮಂತ್ರ ಹೋಮ, ಶಿಖರ ಪ್ರತಿಷ್ಠೆ, ಸಂಜೆ ಸತ್ಯನಾರಾಯಣ ಪೂಜೆ, ದೀಪಾರಾಧನೆ ನೆರವೇರಿತು.