Home ಧಾರ್ಮಿಕ ಸುದ್ದಿ ಸಾವಿರ ಕಂಬದ ಬಸದಿ: ಲಕ್ಷ ದೀಪೋತ್ಸವ; ರಜತ ಮುಕ್ಕೊಡೆ ಸಮರ್ಪಣೆ

ಸಾವಿರ ಕಂಬದ ಬಸದಿ: ಲಕ್ಷ ದೀಪೋತ್ಸವ; ರಜತ ಮುಕ್ಕೊಡೆ ಸಮರ್ಪಣೆ

1266
0
SHARE

ಮೂಡುಬಿದಿರೆ : ಸಾವಿರ ಕಂಬದ ಬಸದಿಯಲ್ಲಿ ಶ್ರೀ ಜೈನಮಠಾಧೀಶ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾ ಚಾರ್ಯವರ್ಯ ಸ್ವಾಮೀಜಿ ಅವರ ಮಾರ್ಗದರ್ಶನ ಹಾಗೂ ಕ್ಷುಲ್ಲಕ ಧ್ಯಾನಸಾಗರ್‌ ಅವರ ಉಪಸ್ಥಿತಿಯಲ್ಲಿ ಡಿ. 25ರಂದು ರಾತ್ರಿ ಲಕ್ಷ ದೀಪೋತ್ಸವವು ಭಗವಾನ್‌ 1008 ಚಂದ್ರಪ್ರಭ ಸ್ವಾಮಿಗೆ ವಿಶೇಷ ಅಭಿಷೇಕದೊಂದಿಗೆ ಜರಗಿತು.

ಧಾರ್ಮಿಕ ಸಭೆಯಲ್ಲಿ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ಅವರು ಆಶೀರ್ವಚನವಿತ್ತರು. ಧನು ರ್ಮಾಸದಲ್ಲಿ ಮೂಡುಬಿದಿರೆ ಬಸದಿಗಳು, ಗಡಿ
ಬಸದಿಗಳಲ್ಲಿ ಮಹಾನೈವೇದ್ಯ ಪೂಜೆ ಸಂಪ್ರದಾಯದಂತೆ ನೆರವೇರಿಸಲಾಗುತ್ತಿದೆ. ದೀಪೋತ್ಸವದ ಮೂಲಕ ಮನದಲ್ಲಿ ಅಡಗಿರುವ ಕತ್ತಲನ್ನು ದೂರ ಮಾಡಿ
ಜ್ಞಾನಜ್ಯೋತಿ ಬೆಳಗಿಸಿ ನೆಮ್ಮದಿಯ ಜೀವನಕ್ಕಾಗಿ ಪ್ರಾರ್ಥಿಸೋಣ ಎಂದರು.

ಭ| ಚಂದ್ರಪ್ರಭ ಸ್ವಾಮಿಗೆ ಉಜಿರೆಯ ನಾಭಿರಾಜ್‌ ಪೂವಣಿ- ಜಯಮಾಲಾ ದಂಪತಿ ಮಕ್ಕಳು ಹರಕೆಯ ರೂಪದಲ್ಲಿ ಭವ್ಯ 2 ಕಿಲೋ ತೂಕದ ರಜತ ಮುಕ್ಕೊಡೆಯನ್ನು ಮೆರವಣಿಗೆಯಲ್ಲಿ ತಂದು ಸಮರ್ಪಿಸಿದರು. ಅಭಿನಂದನೆ
ಸೇವಾರ್ಥಿ ನಾಭಿರಾಜ್‌ -ಜಯ ಮಾಲಾ ದಂಪತಿ, ನೃತ್ಯ ಶಿಕ್ಷಕಿ ತನುಜಾ, ಭರತನಾಟ್ಯ ಯುವ ಪ್ರತಿಭೆ ದೀಪಾನ್ಸಿ ಪ್ರದೀಪ್‌ ಜೈನ್‌ ಇವರನ್ನು ಶ್ರೀ ಮಠದ ವತಿಯಿಂದ ಭಟ್ಟಾರಕ ಸ್ವಾಮೀಜಿ ಅಭಿನಂದಿಸಿ, ಹರಸಿದರು.

ಉಪನ್ಯಾಸಕ ನೇಮಿರಾಜ್‌ ನಿರೂಪಿಸಿದರು. ಮೊಕ್ತೇಸರರಾದ ಪಟ್ಣಶೆಟ್ಟಿ
ಸುಧೇಶ್‌ ಕುಮಾರ್‌, ದಿನೇಶ್‌ ಬೆಟ್ಕೇರಿ. ಡಾ| ಮಹಾವೀರ್‌, ಆಯುಷ್‌ ಅಭಯಚಂದ್ರ ಜೈನ್‌, ವಿಜಯಲಕ್ಷ್ಮೀ ಆರಿಗಾ, ಬಾಹುಬಲಿ ಪ್ರಸಾದ್‌, ಗುಣಪಾಲ
ಹೆಗ್ಡೆ, ಶಂಭವ್‌ ಕುಮಾರ್‌, ಪ್ರೇಮ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here