ಕಟಪಾಡಿ: ಉಡುಪಿ ಮೂಡು ಅಲೆವೂರು ಶ್ರೀ ವಿಷ್ಣುಮೂರ್ತಿ ದೇಗುಲದಲ್ಲಿ ಫೆ.14ರ ಬೆಳಗ್ಗೆ 9ಕ್ಕೆ ಪಂಚವಿಂಶತಿ ದ್ರವ್ಯ ಮಿಳಿತ ಪಂಚಶತೀ ಕಲಶ ಸಹಿತ ಬ್ರಹ್ಮಕುಂಭಾಭಿಷೇಕ , ಶೈವೋತ್ಸವ, ರಂಗಪೂಜೆ ಜರಗಲಿದೆ. ಆ ಪ್ರಯುಕ್ತ ಬೆಳಗ್ಗೆ 7 ಗಂಟೆಗೆ ಕಲಶಾಭಿಷೇಕ ಆರಂಭಗೊಳ್ಳಲಿದ್ದು, ಬ್ರಹ್ಮಕುಂಭಾಭಿಷೇಕದ ಅನಂತರ ನ್ಯಾಸ ಪೂಜೆ, ಭಜನೆ ಮಂಗಳ, ವಾಯುಸ್ತುತಿ ಹೋಮ, 11 ಗಂಟೆಗೆ ಮಹಾಪೂಜೆ, ಪಲ್ಲಪೂಜೆ, ಬ್ರಾಹ್ಮಣ ಸಂತರ್ಪಣೆ, ಮಧ್ಯಾಹ್ನ 1.00 ಗಂಟೆಗೆ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 7ಕ್ಕೆ ರಾತ್ರಿ ಪೂಜೆ, ಶೈವೋತ್ಸವ, ಪುಷ್ಪ ರಥೋತ್ಸವ ಅಷ್ಟಾವಧಾನ ಸೇವೆ. ಮಹಾರಂಗಪೂಜೆ, ಭೂತ ಬಲಿ ನೆರವೇರಲಿದೆ.
ಮಧ್ಯಾಹ್ನ ದಾಮೋದರ ಸೇರಿಗಾರ್ ಅವರಿಂದ ನಾಗಸ್ವರ ವಾದನ, ಸಂಜೆ. 6ಕ್ಕೆ ರಾಯಚೂರು ಶೇಷಗಿರಿದಾಸ್ ಇವರಿಂದ ದಾಸವಾಣಿ, ರಾತ್ರಿ 9.30ರಿಂದ ವೀರ ಬರ್ಬರಿಕಾ ತೆಂಕು ತಿಟ್ಟಿನ ಯಕ್ಷಗಾನ ಜರಗಲಿದೆ.