ಮೂಡಬಿದಿರೆ: ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ| ಅಲೋಶಿಯಸ್ ಪೌಲ್ ಡಿ’ಸೋಜಾ ಅವರ ಅಧ್ಯಕ್ಷತೆ ಯಲ್ಲಿ ರವಿವಾರ ಸಂಜೆ ಮೂಡಬಿದಿರೆ ಅಲಂಗಾರು ಚರ್ಚ್ ಮೈದಾನದಲ್ಲಿ ಮೂಡಬಿದಿರೆ ವಲಯ ಕೆಥೊಲಿಕ್ ಸಭಾದ ಬೆಳ್ಳಿಹಬ್ಬ ಸಮಾರೋಪ ಸಮಾರಂಭ ಜರಗಿತು.
ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಐವನ್ ಡಿ’ಸೋಜಾ ಅವರ ಶಾಸಕರ ನಿಧಿಯಿಂದ ಮೂಡಬಿದಿರೆ ಪುರಸಭಾ ವ್ಯಾಪ್ತಿಯ ಅಲಂಗಾರು ಚರ್ಚ್ ಬಳಿ ಅಳವಡಿಸಲಾದ ಹೈಮಾಸ್ಟ್ ದೀಪ ವ್ಯವಸ್ಥೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ| ಅಲೋಶಿಯಸ್ ಪೌಲ್ ಡಿ’ಸೋಜಾ ಹಾಗೂ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೋ ಅವರು ಈ ಸಂದರ್ಭದಲ್ಲಿ ಉದ್ಘಾಟಿಸಿದರು.
ಜಿ.ಪಂ. ಸದಸ್ಯ ಕೆ.ಪಿ. ಸುಚರಿತಾ ಶೆಟ್ಟಿ, ವಲಯದ ಚರ್ಚ್ಗಳ ಪ್ರಧಾನ ಧರ್ಮಗುರು ರೆ| ಫಾ| ಪೌಲ್ ಸಿಕ್ವೇರಾ, ರೆ|ಫಾ| ಮ್ಯಾಥ್ಯೂ ವಾಸ್, ಪುರಸಭಾ ಸದಸ್ಯ ಆಲ್ವಿನ್ ಮಿನೇಜಸ್, ಜಿಲ್ಲಾ ಯುವ ಇಂಟಕ್ ಅಧ್ಯಕ್ಷ ಪುನೀತ್ ಶೆಟ್ಟಿ ಉಪಸ್ಥಿತರಿದ್ದರು.