Home ಧಾರ್ಮಿಕ ಸುದ್ದಿ ‘ಧಾರ್ಮಿಕ ಚಿಂತನೆಗಳನ್ನು ಉದ್ದೀಪಿಸುವುದು ಅಗತ್ಯ’

‘ಧಾರ್ಮಿಕ ಚಿಂತನೆಗಳನ್ನು ಉದ್ದೀಪಿಸುವುದು ಅಗತ್ಯ’

ನವೀಕೃತ ಮಂಜುಶ್ರೀ ಭಜನ ಮಂದಿರ: ಧಾರ್ಮಿಕ ಸಭೆ

964
0
SHARE

ಮೂಡುಬಿದಿರೆ: ಟಿ.ವಿ., ಮೊಬೈಲ್ಗಳಿಂದ ಮಾನವೀಯ ಸಂಬಂಧಗಳು ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ಜನರಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಧಾರ್ಮಿಕ ಚಿಂತನೆಗಳನ್ನು ಹೆಚ್ಚಿಸುವ, ಗುರುಹಿರಿಯರನ್ನು ಗೌರವಿಸುವ, ಆಚಾರ ವಿಚಾರಗಳನ್ನು ತಿಳಿಯಪಡಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಕೇಮಾರು ಮಠದ ಶ್ರೀ ಈಶ ವಿಟuಲದಾಸ ಸ್ವಾಮೀಜಿ ಹೇಳಿದರು.

ಮಾರ್ಪಾಡಿ ಗ್ರಾಮದ ಮುರಮೇಲುನಲ್ಲಿ ನವೀಕೃತ ಮಂಜುಶ್ರೀ ಭಜನ ಮಂದಿರದ ಉದ್ಘಾಟನ ಸಮಾರಂಭದ ನಿಮಿತ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಮಾರೂರು ಖಂಡಿಗ ರಾಮದಾಸ ಆಸ್ರಣ್ಣ ನವೀಕೃತ ಭಜನ ಮಂದಿರವನ್ನು ಉದ್ಘಾಟಿಸಿದರು. ಭಜನ ಮಂದಿರದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದರು.

ಉದ್ಯಮಿ ಸುಜೀರುಗುತ್ತು ಐತಪ್ಪ ಆಳ್ವ, ಎಂಸಿಎಸ್‌ ಬ್ಯಾಂಕ್‌ನ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್‌ ಎಂ., ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ, ನಡ್ಯೋಡಿ ಮಹಿಳಾ ಮಂಡಲದ ಗೌರವ ಅಧ್ಯಕ್ಷೆ ಸುಜಯ ಅಶೋಕ್‌ ಜೈನ್‌ ಮೊದಲಾದವರು ಉಪಸ್ಥಿತರಿದ್ದರು.

ಶಾಸಕ ಉಮಾನಾಥ ಕೋಟ್ಯಾನ್‌, ಮಾಜಿ ಸಚಿವ ಅಭಯಚಂದ್ರ ಜೈನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭಜನ ಮಂದಿರದ ದಾನಿಗಳನ್ನು ಗೌರವಿಸಲಾಯಿತು. ಉದಯ ಕುಮಾರ್‌ ಮತ್ತು ಅಕ್ಷಯ್‌ ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು. ಗಂಗಾಧರ ಬಂಗೇರ ಸ್ವಾಗತಿಸಿದರು. ರತ್ನಾಕರ ಹೆಗ್ಡೆ ವರದಿ ವಾಚಿಸಿದರು. ವಿಶ್ವನಾಥ ಸಾಲ್ಯಾನ್‌ ಮತ್ತು ಪ್ರಸನ್ನ ಹೆಗ್ಡೆ ನಿರೂಪಿಸಿದರು. ರಮೇಶ್‌ ಅಮೀನ್‌ ವಂದಿಸಿದರು.

ಜಾಗೃತಿ ಮೂಡಿಸಿದೆ
ಎಸ್‌ಕೆಡಿಆರ್‌ಪಿಯ ಯೋಜನಾಧಿಕಾರಿ ಕೃಷ್ಣ ಟಿ. ಮಾತನಾಡಿ, ಧಾರ್ಮಿಕ ಪ್ರಜ್ಞೆಯಿಂದ ಊರಲ್ಲಿ ಸುಸಂಸ್ಕೃತ ನಾಗರಿಕರನ್ನು ಕಾಣಬಹುದು. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಜನ ಕಮ್ಮಟವನ್ನು ನಡೆಸುವ ಮೂಲಕ ಭಜನೆ ಸಂಕೀರ್ತನೆಯ ಜಾಗೃತಿ ಮೂಡಿಸಲಾಗಿದೆ ಎಂದರು.

LEAVE A REPLY

Please enter your comment!
Please enter your name here