Home ಧಾರ್ಮಿಕ ಸುದ್ದಿ ಮೂಡಬಿದಿರೆ ಶ್ರೀ ಹನುಮಂತ ದೇವರಿಗೆ ಬೆಳ್ಳಿ ಗದೆ ಅರ್ಪಣೆ

ಮೂಡಬಿದಿರೆ ಶ್ರೀ ಹನುಮಂತ ದೇವರಿಗೆ ಬೆಳ್ಳಿ ಗದೆ ಅರ್ಪಣೆ

979
0
SHARE

ಮೂಡಬಿದಿರೆ: ಇಲ್ಲಿನ ಶ್ರೀ ಹನುಮಂತ ದೇವಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯಿಲಿ – ಮಾಲತಿ ವಿ. ಮೊಯಿಲಿ ದಂಪತಿ ಬೆಳ್ಳಿಯ ಗದೆಯನ್ನು ರವಿವಾರ ಬೆಳಗ್ಗೆ 11.30ರ ವೇಳೆ ಸಮರ್ಪಿಸಿದರು.

ಮಾಜಿ ಸಚಿವ ಕೆ. ಅಭಯಚಂದ್ರ, ಮೂಡುವೇಣುಪುರ ಶ್ರೀ ವೆಂಕಟರಮಣ ಹಾಗೂ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ್‌ ಪೈ, ಮೊಕ್ತೇಸರರಾದ ಪಿ. ರಾಮನಾಥ ಭಟ್‌, ಟಿ. ರಘುವೀರ್‌ ಶೆಣೈ, ಎಂ. ರಾಜೇಶ್‌ ಮಲ್ಯ, ಪುರಸಭಾ ಸದಸ್ಯ ರತ್ನಾಕರ ದೇವಾಡಿಗ, ಮೂಡಬಿದಿರೆ ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ರತ್ನಾಕರ ಸಿ. ಮೊಯಿಲಿ, ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಹಾಸ ಸನಿಲ್‌, ಕಾಂಗ್ರೆಸ್‌ ಮುಖಂಡ ಕೃಷ್ಣಮೂರ್ತಿ ಕಾರ್ಕಳ
ಸಹಿತ ಹಲವರು ಉಪಸ್ಥಿತರಿದ್ದರು.

ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್‌ ಭಟ್‌ ಪೂಜಾವಿಧಿ ಹಾಗೂ ಪ್ರಾರ್ಥನೆ ನೆರವೇರಿಸಿದರು. ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ವೀರಪ್ಪ ಮೊಯಿಲಿ ದಂಪತಿಯನ್ನು ಗೌರವಿಸಲಾಯಿತು.

ಶ್ರೀರಾಮ ಮಂದಿರಕ್ಕೆ ಭೇಟಿ
ಗೌರಿಕೆರೆ ಬಳಿಯಿರುವ ಶ್ರೀರಾಮ ಮಂದಿರಕ್ಕೆ ವೀರಪ್ಪ ಮೊಯಿಲಿ ದಂಪತಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮೂಡಬಿದಿರೆ ದೇವಾಡಿಗ ಸಂಘದ ಅಧ್ಯಕ್ಷ ಶಶಿಧರ ದೇವಾಡಿಗ, ಮಹಿಳಾ ಸಮಿತಿ ಅಧ್ಯಕ್ಷೆ ಭಾರತಿ ರತ್ನಾಕರ ದೇವಾಡಿಗ, ಯುವ ವೇದಿಕೆ ಅಧ್ಯಕ್ಷ ಸುಮಂತ್‌ ದೇವಾಡಿಗ, ಪುರಂದರ ದೇವಾಡಿಗ ಸಹಿತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here