Home ಧಾರ್ಮಿಕ ಸುದ್ದಿ ತಿಂಗಳಾಡಿ ಮಾರಿಯಮ ದೇವಸ್ಮಾ ನ: ಮಾರಿಪೂಜ

ತಿಂಗಳಾಡಿ ಮಾರಿಯಮ ದೇವಸ್ಮಾ ನ: ಮಾರಿಪೂಜ

1202
0
SHARE

ಕೆಯ್ಯೂರು : ದುರ್ಗೆ ಬೇರಲ್ಲ, ಮಾರಿಯಮ್ಮ ಬೇರಲ್ಲ, ಎಲ್ಲವೂ ದೇವಿಯ ಅವತಾರಗಳು. ದುರ್ಗಾಪರಮೇಶ್ವರಿ
ದೇವಿಯು ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಭಕ್ತರ ಕಷ್ಟಗಳಿಗೆ ಪರಿಹಾರ ನೀಡಿದ್ದಾಳೆ. ಭೂಮಂಡಲದಲ್ಲಿ ಅತ್ಯಂತ ಕಾರಣಿಕತೆಯನ್ನು ಹೊಂದಿರುವ ದೇವಿಯನ್ನು ಭಕ್ತಿಯಿಂದ ಆರಾಧನೆ ಮಾಡಿದರೆ ಕಷ್ಟಗಳು ದೂರವಾಗುತ್ತದೆ ಎಂದು ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಶಶಿಧರ ರಾವ್‌ ಬೊಳಿಕಲ ಹೇಳಿದರು.

ಕೆದಂಬಾಡಿ ಗ್ರಾಮದ ತಿಂಗಳಾಡಿ ಗಾಂಧಿನಗರದಲ್ಲಿರುವ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ಮಾರಿಪೂಜೆ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆ, ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮದ ಉಳಿವಿಗಾಗಿ ನಾವೆಲ್ಲರೂ ಒಗ್ಗೂಡಬೇಕಿದೆ. ಸಮಾಜದ ಕ್ಷೇಮಕ್ಕಾಗಿ ನಾವೆಲ್ಲ ಪೂಜೆ ಮಾಡುತ್ತೇವೆ ಎಂದರು.

ಮುಖ್ಯ ಅತಿಥಿಯಾಗಿದ್ದ ತಿಂಗಳಾಡಿ ಪುತ್ತೂರಾಯ ಎಂಟರ್‌ಪ್ರೈಸಸ್‌ ಮಾಲಕ, ಉದ್ಯಮಿ ಹರೀಶ್‌ ಕೆ. ಪುತ್ತೂರಾಯ ಮಾತನಾಡಿ, ಸಂಘಟನೆಯಿಂದ ಉತ್ತಮ ಕೆಲಸಗಳು, ಅಭಿವೃದ್ಧಿ ಸಾಧ್ಯವಿದೆ ಎಂಬುದನ್ನು ಮಾರಿಯಮ್ಮ ಸೇವಾ ಸಮಿತಿ ಮಾಡಿ ತೋರಿಸಿದೆ. ನಾವೆಲ್ಲರೂ ದುಶ್ಚಟಗಳನ್ನು ಬಿಟ್ಟು ಅಭಿವೃದ್ಧಿಗೆ ಮುಂದಾಗಬೇಕು. ಒಗ್ಗಟ್ಟಿನ ಮೂಲಕ ನಮ್ಮ ಶಕ್ತಿಯನ್ನು ತೋರಿಸಬೇಕು. ನಮ್ಮ ಅಭಿವೃದ್ಧಿ ನಮ್ಮಿಂದಲೇ ಸಾಧ್ಯವಾಗುತ್ತದೆ ಎಂದರು.

ತಾ| ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಂದರ ಸಿದ್ಯಾಳ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆದಂಬಾಡಿ ಕೆಯ್ಯೂರು ಸಿಎ ಬ್ಯಾಂಕ್‌ ಮಾಜಿ ಕಾರ್ಯನಿರ್ವಹಣಾ ಕಾರಿ ರಾಮಯ್ಯ ರೈ ಎನ್‌., ಕೃಷಿಕ ಜಯಾನಂದ ರೈ ಮಿತ್ರಂಪಾಡಿ, ಕೆದಂಬಾಡಿ ಗ್ರಾ.ಪಂ. ಸದಸ್ಯ ಕೃಷ್ಣ ಕುಮಾರ್‌ ರೈ ಕೆದಂಬಾಡಿ ಗುತ್ತು, ಕೃಷಿಕ ಬಾಲಚಂದ್ರ ರೈ ಬೆದ್ರುಮಾರು ಉಪಸ್ಥಿತರಿದ್ದರು. ಭವ್ಯಾ ಪ್ರಾರ್ಥಿಸಿದರು.

ಮಾರಿಯಮ್ಮ ಸೇವಾ ಸಮಿತಿಯ ರಾಜು ಟಿ. ಸ್ವಾಗತಿಸಿದರು. ಸಮಿತಿಯ ಚಿದಾನಂದ, ಶಿವಪ್ಪ, ವರುಣ್‌ ಕುಮಾರ್‌, ಬಾಲಕೃಷ್ಣ, ಶೇಖರ ಕಲ್ಪಣೆ, ರವಿ ದರ್ಬೆ, ಚೋಮಯ್ಯ ಅತಿಥಿಗಳಿಗೆ ಹೂವು ನೀಡಿ ಸ್ವಾಗತಿಸಿದರು. ಸಮಿತಿಯ ಅಣ್ಣು ತಿಂಗಳಾಡಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ವಿಜೃಂಭಣೆಯ ಮಾರಿಪೂಜೆ ಮೇ 14ರಂದು ಬೆಳಗ್ಗೆ ಗಣಪತಿ ಹೋಮ, ಮಧ್ಯಾಹ್ನ ಶುದ್ಧಿ ಕಲಶ ನಡೆದು ಹರಿಪ್ರಸಾದ್‌ ರೈ ತಿಂಗಳಾಡಿ ಇವರ ಸೇವಾರ್ಥ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಭಂಡಾರ ತೆಗೆದು, ಭಂಡಾರ ಶುದ್ಧಿಗೊಳಿಸುವ ಕಾರ್ಯಕ್ರಮ ಬಳಿಕ ಭಂಡಾರ ಉತ್ಸವ ಬಯಲಿಗೆ ಕೊಂಡೊ ಯ್ಯಲಾಯಿತು. ಅನ್ನಸಂತರ್ಪಣೆ ಬಳಿಕ ಮಕ್ಕಳು ಹಾಗೂ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸವಿತಾ ಮ್ಯೂಸಿಕ್‌ ಪುತ್ತೂರು ಇವರಿಂದ ಸಂಗೀತ ರಸಮಂಜರಿ ನಡೆಯಿತು. ದೇವಿಯ ಗುಡಿ ಪ್ರತಿಷ್ಠಾಪನೆ ನಡೆದು, ಗುಳಿಗ, ಪಂಜುರ್ಲಿ, ಕಲ್ಲುರ್ಟಿ, ಶನಿಗುಳಿಗ, ಕಾಳಭೈರವ ದೈವಗಳ ದರ್ಶನ ಮತ್ತು ತಂಬಿಲ ಸೇವೆ ನಡೆಯಿತು. ಮೇ 15ರಂದು ಸೂರ್ಯೋದಯಕ್ಕೆ ಮಾರಿ ಕಡಿಯುವ ಕಾರ್ಯಕ್ರಮ, ಮಧ್ಯಾಹ್ನ ಅಮ್ಮನವರ ದರ್ಶನ ಮತ್ತು ಇತರ ದೈವಗಳ ದರ್ಶನ ನಡೆಯಿತು. ಹರಿಕೆ ಕಾಣಿಕೆ ಸ್ವೀಕಾರ, ಓಲೆಮುಂಡೋವು ಮೋಹನ್‌ ರೈ ಸೇವಾರ್ಥ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಂಡಾರವನ್ನು ದೇವಾಲಯಕ್ಕೆ ಕೊಂಡೊಯ್ಯಲಾಯಿತು.

ಮೇ 16ರಂದು ಸೂರ್ಯೋದಯಕ್ಕೆ ಶ್ರೀ ದೇವಿಯ ಭಂಡಾರ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಅಧ್ಯಕ್ಷ ಮಾದಿಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here