ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ಮುಹಿಯುದ್ದೀನ್ ಜುಮಾ ಮಸ್ಜಿದ್ ಕಿದ್ಮತುಲ್ ಇಸ್ಲಾಮ್ ಜಮಾಅತ್ ಕಮಿಟಿಯ ವತಿಯಿಂದ ಪ್ರತೀ ತಿಂಗಳಿಗೊಮ್ಮೆ ನಡೆಸಿಕೊಂಡು ಬರುವ ಮಹ್ಳರತುಲ್ ಬದ್ರಿಯಾಃ ಆಧ್ಯಾತ್ಮಿಕ ಸಂಗಮವು ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಸುಳ್ಯ ಅವರ ನೇತೃತ್ವದಲ್ಲಿ ನಡೆಯಿತು.
ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ಕರೀಮ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಅಬ್ದುಲ್ಲ ಅಹÕನಿ ಮಾಡನ್ನೂರು ಉದೊàಧನೆ ಮಾಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸಿ.ಪಿ. ಅಬೂಬಕರ್ ಮದನಿ, ಪ್ರ.ಕಾರ್ಯದರ್ಶಿ ಬಿ. ಅಬ್ದುರ್ರಹ್ಮಾನ್, ಕೋಶಾ ಕಾರಿ ಸಿ.ಪಿ. ಮುಹಮ್ಮದ್ ಹಾಜಿ, ಇಬ್ರಾಹಿಮ್ ಮುಸ್ಲಿಯಾರ್, ಕಾರ್ಯದರ್ಶಿ ಅಬ್ದುಲ್ ಅಝೀಝ್, ಪುತ್ತುಞಿ ಹಾಜಿ ಬಾಯಂಬಾಡಿ, ಮಮ್ಮಿಞಿ ಹಾಜಿ ಮುಕ್ಕೂರು, ಪಿ.ಎ. ಉಸ್ಮಾನ್ ಹಾಜಿ, ಇಸ್ಮಾಈಲ್ ಸಅದಿ, ಸಿದ್ದೀಕ್ ಕಟ್ಟೆಕ್ಕಾರ್ ಸುಳ್ಯ, ಹಮೀದ್ ಎ.ಪಿ. ಮೊದಲಾದವರು ಉಪಸ್ಥಿತರಿದ್ದರು.