Home ಧಾರ್ಮಿಕ ಸುದ್ದಿ ಮೊಗವೀರಪೇಟೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಜ.14-17: ವಾರ್ಷಿಕ ಮಕರ ಸಂಕ್ರಮಣ ಜಾತ್ರೆ

ಮೊಗವೀರಪೇಟೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಜ.14-17: ವಾರ್ಷಿಕ ಮಕರ ಸಂಕ್ರಮಣ ಜಾತ್ರೆ

1730
0
SHARE

ಬ್ರಹ್ಮಾವರ: ಸೂರಾಲು ಮಾಗಣೆ ಮೊಗವೀರಪೇಟೆಯ ಸಪರಿವಾರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಮಕರ ಸಂಕ್ರಮಣ ಜಾತ್ರೆ ಹಾಗೂ ಗೆಂಡೋತ್ಸವವು ಜ.14ರಿಂದ 17ರ ವರೆಗೆ ಜರಗಲಿದೆ.

ಜ.14ರಂದು ಕಲಶಾಭಿಷೇಕ, ಜ.15ರ ಸಂಜೆ ಭಜನೆ, ರಾತ್ರಿ ಗೆಂಡೋತ್ಸವ, ಸುತ್ತು ಬಲಿ, ಜ.16ರ ಬೆಳಗ್ಗೆ ಶ್ರೀ ನಾಗದೇವರಿಗೆ ಹಾಲಿಟ್ಟು ಸೇವೆ, ನಾಗದರ್ಶನ, ನಾಗಬ್ರಹ್ಮನ ಢಕ್ಕೆಬಲಿ, ತುಲಾಭಾರ ಸೇವೆ, ಸಂಜೆ ರಂಗಪೂಜೆ, ರಾತ್ರಿ ನಾಟಕ ಪ್ರದರ್ಶನ ನಡೆಯಲಿದೆ.

ಜ.17ರಂದು ನಾಗದರ್ಶನ, ಕಪ್ಪಣ್ಣ ದೇವರ ದರ್ಶನ, ತುಲಾಭಾರ ಸೇವೆ, ಸಂಜೆ ಮಾರಿಕಾಂಬ ಸಾನಿಧ್ಯದಲ್ಲಿ ದರ್ಶನ, ಮಲಸಾವರಿ ಭೋಗ, ಜೈನರ ಹಾೖಗುಳಿ, ಕೀಳು ದೈವ, ದೇವರುಗಳಿಗೆ ಭೋಗ, ಮಲಸಾವರಿ ದರ್ಶನ ಜರಗಲಿದೆ.

ಸಿಡಿ ಬಿಡುಗಡೆ

ಜ.16ರ ರಾತ್ರಿ ಚಲನಚಿತ್ರ ನಿರ್ದೇಶಕ ಕೃಷ್ಣ ಪ್ರಸಾದ್‌ ಉಪ್ಪಿನಕೋಟೆ ನೇತೃತ್ವದಲ್ಲಿ ಹಿಂದಿ, ಕನ್ನಡದ ಶೇಷ್ಠ ಗಾಯಕರಿಂದ ಕ್ಷೇತ್ರದ ಮಹಿಮೆಯನ್ನೊಳಗೊಂಡ ಭಕ್ತಿಗೀತೆ 3ನೇ ಧ್ವನಿ ಸುರುಳಿ ಬಿಡುಗಡೆ, ಧಾರ್ಮಿಕ ಸಭೆ, ಸಮ್ಮಾನ ಕಾರ್ಯಕ್ರಮ ಜರಗಲಿದೆ.

ಡಾ| ಜಿ.ಶಂಕರ್‌ ಉದ್ಘಾಟಿಸುವರು. ಪ್ರಮೋದ್‌ ಮಧ್ವರಾಜ್‌, ರಘುಪತಿ ಭಟ್ ಮೊದಲಾದವರು ಉಪಸ್ಥಿತರಿರುವರು. ಆನಂದ ಸಿ. ಕುಂದರ್‌ ಮತ್ತು ಕೃಷ್ಣ ಪ್ರಸಾದ್‌ ಅವರನ್ನು ಸೂರಾಲು ಅರಮನೆ ಸುದರ್ಶನ್‌ ಜೈನ್‌ ಸಮ್ಮಾನಿಸುವರು.

LEAVE A REPLY

Please enter your comment!
Please enter your name here