Home ಧಾರ್ಮಿಕ ಸುದ್ದಿ ಮೊಗರನಾಡು ಸಾವಿರ ಸೀಮೆ ನಿಟಿಲಾಪುರ ದೇವರ ಶ್ರೀ ಮನ್ಮಹಾರಥೋತ್ಸವ ಸಂಪನ್ನ

ಮೊಗರನಾಡು ಸಾವಿರ ಸೀಮೆ ನಿಟಿಲಾಪುರ ದೇವರ ಶ್ರೀ ಮನ್ಮಹಾರಥೋತ್ಸವ ಸಂಪನ್ನ

1153
0
SHARE

ಬಂಟ್ವಾಳ : ಮೊಗರನಾಡು ಸಾವಿರ ಸೀಮೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ಶ್ರೀಕ್ಷೇತ್ರ ನಿಟಿಲಾಪುರದಲ್ಲಿ ಶ್ರೀ ದೇವರ ವರ್ಷಾವಧಿ ಜಾತ್ರೆ, ಶ್ರೀ ಮನ್ಮಹಾರಥೋತ್ಸವ ಮಾ. 17ರಂದು ರಾತ್ರಿ ದೇವರು ರಥಾರೂಢ ಆಗುವುದರೊಂದಿಗೆ ಸಂಪನ್ನಗೊಂಡಿತು.

ವಾರ್ಷಿಕ ಜಾತ್ರೆಗೆ ಮಾ. 6ರಂದು ಗೊನೆ ಮುಹೂರ್ತ ನಡೆದಿತ್ತು. ಮಾ. 14ರಂದು ದೈವಗಳ ಭಂಡಾರ ಆಗಮನ, ಶ್ರೀ ದೇವರಿಗೆ ಏಕಾದಶ ರುದ್ರಾಭಿಷೇಕ, ಧ್ವಜಾರೋಹಣ, ಬಲಿ ಉತ್ಸವ, ಕಟ್ಟೆ ಸವಾರಿಗಳು ನಡೆದಿದ್ದವು. ಮಾ. 15ರಂದು ಬೊಮ್ಮಣಕೋಡಿ ಕಟ್ಟೆ ಸವಾರಿ, ಬಲಿ ಉತ್ಸವಗಳು, 16ರಂದು ಪಿಲಿಂಜ ಕಟ್ಟೆಗೆ ಸವಾರಿ, ಉಯ್ನಾಲೋತ್ಸವ, ದುರ್ಗಾಲಯ ದೈವಗಳಿಗೆ ನೇಮೋತ್ಸವ ನಡೆದಿತ್ತು.

ಮಾ. 17ರಂದು ದೀಪದ ಬಲಿ ಉತ್ಸವ, ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ತಪ್ಪಂಗಾಯಿ, ಮಹಾಪೂಜೆ, ಮಹಾಪ್ರಸಾದ, ರಾತ್ರಿ 8ರಿಂದ ಶ್ರೀ ಮನ್ಮಹಾರಥೋತ್ಸವ, ಬೆಡಿಸೇವೆ, ಬಟ್ಟಲು ಕಾಣಿಕೆ ಕಾಣಿಕೆ, ಬಲಿ ಉತ್ಸವ, ಉಯ್ನಾಲೋತ್ಸವ, ಶಯನೋತ್ಸವ ನಡೆಯಿತು. ಮಾ. 18ರಂದು ದೇವರ ಕವಾಟೋದ್ಘಾಟನೆ, ತುಲಾಭಾರ ಸೇವೆ, ಅವಭೃಥ ಬಲಿ ಉತ್ಸವ, ವಸಂತಕಟ್ಟೆಯಲ್ಲಿ ಪೂಜೆ, ಓಕುಳಿ ಪ್ರಸಾದ, ಅವಭೃಥ ಸವಾರಿ ಪಾಣೆಮಂಗಳೂರು ಭಯಂಕೇಶ್ವರ ದೇವಸ್ಥಾನದ ಬಳಿ ನೇತ್ರಾವತಿ ನದಿ ಸ್ನಾನ ಮಾಡಿ ಹಿಂದೆ ಬಂದು ಧ್ವಜಾವರೋಹಣ, ಬಟ್ಟಲು ಕಾಣಿಕೆ, ಮಹಾಪೂಜೆ ನಡೆಯಿತು. ಮಾ. 19ರಂದು ಶ್ರೀ ದೇವರ ಸನ್ನಿಧಿಯಲ್ಲಿ ಪಿಲಿಚಾಮುಂಡಿ, ಪಂಜುರ್ಲಿ ದೈವಗಳ ನೇಮೋತ್ಸವ ನಡೆಯುವುದು.

ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಶೋಕ ಕುಮಾರ್‌ ಬರಿಮಾರು, ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷ ಬಿ. ರಮಾನಾಥ ರೈ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಮಾಣಿ
ಬದಿಗುಡ್ಡೆ,ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here