ಬಂಟ್ವಾಳ : ಶೈಖ್ ವಲಿಯುಲ್ಲಾಹಿ (ಖ.ಸಿ.) ಅವರ ಹೆಸರಿನಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುತ್ತಿರುವ ಮಿತ್ತಬೈಲು ಉರೂಸ್-ನೇರ್ಚೆ ಹಾಗೂ ಉರೂಸ್ ಸಮಾರೋಪ ಸಮಾರಂಭ ಬಿ.ಸಿ. ರೋಡ್-ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಜರಗಿತು.
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಅಧ್ಯಕ್ಷ ಶೈಖುನಾ ಸೈಯದುಲ್ ಅಸೈಯದ್ ಮುಹಮ್ಮದ್ ಜಿಫ್ರಿ ಮತ್ತು ಕೋಯ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು. ಸಮಸ್ತ ಮುಶಾವರದ ಉಪಾಧ್ಯಕ್ಷ ಶೈಖುನಾ ಅಬ್ದುಲ್ ಜಬ್ಟಾರ್ ಉಸ್ತಾದ್ ಮಿತ್ತಬೈಲ್ ಅಧ್ಯಕ್ಷತೆ ವಹಿಸಿದ್ದರು. ಅತ್ರಾಡಿ ಖಾಝಿ ವಿ.ಕೆ. ಅಬೂಬಕರ್ ಹಾಜಿ ದುವಾ ನೆರವೇರಿಸಿದರು.
ಮಸೀದಿ ಖತೀಬ್ ಎಂ.ವೈ. ಅಶ್ರಫ್ ಫೈಝಿ ಮುಖ್ಯ ಭಾಷಣ ಮಾಡಿದರು. ಮಸೀದಿ ಸಹಮುದರ್ರಿಸ್ ಅಬ್ದುಲ್ ಹಮೀದ್ ದಾರಿಮಿ, ಮಸೀದಿ ಅಧ್ಯಕ್ಷ ಎಸ್. ಹಬೀಬುಲ್ಲಾ, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಉಪಸ್ಥಿತರಿದ್ದರು.
ಬಿ. ರಮಾನಾಥ ರೈ, ಯು.ಟಿ. ಖಾದರ್, ಬಿ.ಕೆ. ಹರಿಪ್ರಸಾದ್, ಕೆ. ಅಶ್ರಫ್, ಕೆ.ಎಂ. ಇಬ್ರಾಹಿಂ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸದಾಶಿವ ಬಂಗೇರ, ಮುಹಮ್ಮದ್ ನಂದರಬೆಟ್ಟು, ಮುಹಮ್ಮದ್ ಶರೀಫ್, ಮುಹಮ್ಮದ್ ಅದ್ದೇಡಿ ಭಾಗವಹಿಸಿದ್ದರು.