ಪುಂಜಾಲಕಟ್ಟೆ : ಬಂಟ್ವಾಳ ತಾ| ನಯನಾಡು ಗ್ರಾಮದ ಮಿತ್ತಬೆಟ್ಟು ಶ್ರೀ ಮಹಮ್ಮಾಯಿ ವನದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯು ಜ.26ರಂದು ಜರಗಿತು. ವೇ| ಮೂ| ಬ್ರಹ್ಮಶ್ರೀ ನಡ್ವಂತಾಡಿ ಬಾಲ ಕೃಷ್ಣ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ಬೆಳಗ್ಗೆ ಪುಣ್ಯಾಹವಾಚನ, ನವಕಲಶಾರಾಧನೆ, ಮಹಾಚಂಡಿಕಾ ಯಾಗ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಶ್ರೀ ವನದುರ್ಗಾದೇವಿ ಭಜನ ಮಂಡಳಿ, ಮಿತ್ತಬೆಟ್ಟು ಇವರಿಂದ ಮತ್ತು ನಯನಾಡು ಶ್ರೀರಾಮ ಭಜನ ಮಂಡಳಿ ಅವರಿಂದ ಭಜನೆ, ಹೂವಿನ ಪೂಜೆ, ರಾತ್ರಿ ದೀಪಾರಾಧನೆ, ಶ್ರೀ ದೇವಿ ದರ್ಶನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸರಪಾಡಿ ಬಾಚಕೆರೆ ಮೇಳದವರಿಂದ ಕದಂಬ ಕೌಶಿಕೆ ಕಾಲಮಿತಿ ಯಕ್ಷಗಾನ ಬಯಲಾಟ, ಪರಿವಾರ ದೈವಗಳಾದ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ನೇಮ ನಡೆಯಿತು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎನ್. ಮೋಹನ್ ಹೆಗ್ಡೆ, ಸಲಹಾ ಮಂಡಳಿ ಅಧ್ಯಕ್ಷ ಬಾಲಯ್ಯ ಹೆಗ್ಡೆ, ಮಹಾಪೋಷಕ ಸುಂದರರಾಜ್ ಹೆಗ್ಡೆ ಮುಂಬೈ, ಸೇವಾ ಮಂಡಳಿ ಅಧ್ಯಕ್ಷ ನಿತ್ಯಾನಂದ ಮಾಲಾಡಿ, ಭಜನ ಮಂಡಳಿ ಅಧ್ಯಕ್ಷ ಉಮೇಶ ಆಚಾರ್ಯ, ಅರ್ಚಕರಾದ ಲಕ್ಷಣ ಹೆಗ್ಡೆ ಪುಂಜಾಲಕಟ್ಟೆ, ರಾಘವ ಹೆಗ್ಡೆ ಕೊಲ್ಪೆದಬೈಲು, ಸಹಾಯಕ ಸುರೇಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.