ಕುಂದಾಪುರ: ಮನುಷ್ಯ ಬಾಳು ಸಫಲವಾಗಬೇಕಾದರೆ ಪವಿತ್ರ ಪುಸ್ತಕಗಳನ್ನು ಓದಿ ಅದರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸ್ವರ್ಗ ಸಾಮ್ರಾಜ್ಯವನ್ನು ಪಡೆಯಬೇಕು. ಅದಕ್ಕಾಗಿ ನಿತ್ಯ ಪವಿತ್ರ ಪುಸ್ತಕದ ಪಠಣದೊಂದಿಗೆ ಏಸುವಿನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕುಂದಾಪುರ ರೊಜರಿ ಮಾತಾ ಇಗರ್ಜಿಯ ಧರ್ಮಗುರು ರೇ|ಫಾ|ಅನಿಲ್ ಡಿ’ಸೋಜಾ ಸಂದೇಶ ನೀಡಿದರು.
ಅವರು ಕುಂದಾಪುರ ಇಗರ್ಜಿಯ ಕ್ರಿಶ್ಚಿಯನ್ ವಿದ್ಯಾರ್ಥಿಗಳಾದ 4ನೇ ತರಗತಿಯಿಂದ 10ನೇ ತರಗತಿಯವರಿಗೆ ಬೈಬಲ್ ಆಯೋಗದಿಂದ, ಚರ್ಚ್ ಸಭಾಭವನದಲ್ಲಿ ಆಯೋಜಿಸಲ್ಪಟ್ಟ ಬೈಬಲ್ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಬೈಬಲ್ ಆಯೋಗ, ಕ್ರೈಸ್ತ ಶಿಕ್ಷಣ ಆಯೋಗ ಮತ್ತು ಪವಿತ್ರ ಸಂಸ್ಕಾರದ ಆಯೋಗದ ನಿರ್ದೇಶಕ ವಂ|ಫಾ| ಸ್ಟೀವನ್ ಡಿ’ಸೋಜಾ ಮಕ್ಕಳಿಗೆ ತರಬೇತಿಯನ್ನು ನೀಡಿದರು. ಭಗಿನಿ ಮಾರೀಸ್, ಆಯೋಗದ ಸದಸ್ಯರಾದ ಆರ್ಚಿಬಾಲ್ಡ್ ಕರ್ವಾಲ್ಲೊ, ವೀಣಾ ಆಲ್ಮೇಡಾ, ಡೇಜಿ ರೊಡ್ರಿಗಸ್, ಆಯ್ರಿನ್ ಫೆರ್ನಾಂಡಿಸ್, ಕೆಥೊಲೀಕ್ ಸ್ತ್ರೀ ಸಂಘಟನೇಯ ಅಧ್ಯಕ್ಷೆ ಶಾಂತಿ ಬಾರೆಟ್ಟೊ ಹಾಜರಿದ್ದರು. ಎರಡು ದಿವಸಗಳ ಈ ಶಿಬಿರಕ್ಕೆ ಸ್ತ್ರೀ ಸಂಘಟನೆಯ ಮಹಿಳೆಯರು ಈ ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗಾಗಿ ಊಟೋಪಚಾರದ ಹೊಣೆಯನ್ನು ವಹಿಸಿರುವುದನ್ನು ರೇ|ಫಾ| ಅನಿಲ್ ಡಿ’ಸೋಜಾ ಶ್ಲಾಘಿಸಿದರು.