ಸುಳ್ಯ ಫೆ. 20: ಉದ್ದೇಶ ಶುದ್ಧಿ, ಶೀಲ ಮತ್ತು ಸಮರ್ಪಣ ಭಾವವಿದ್ದರೆ ನಮ್ಮ ಪ್ರತಿ ಕಾರ್ಯ ಯಶಸ್ಸು ಕಂಡು, ಅದರ ಪುಣ್ಯಲಭಿಸುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.
ಅಜ್ಜಾವರ ಗ್ರಾಮದ ಮೇದಿನಡ್ಕ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶ ಸಭಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ದೇವರ ಕಾರ್ಯಕ್ಕೆ ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳಬೇಕು. ಅದರ ಫಲ ನಮಗೆ ಅಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆಗೆ ದೊರೆಯುತ್ತದೆ ಎಂದು ಅವರು ನುಡಿದರು.
ಮೇದಿನಡ್ಕ ದೇವಸ್ಥಾನದ ಬ್ರಹ್ಮಕಲಶ ಗೌರವಾಧ್ಯಕ್ಷ ಗುಡ್ಡಪ್ಪ ರೈ ಮೇನಾಲ ಸಭಾಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಕಾರ್ಯಕ್ರಮ ಉದ್ಘಾಟಿಸಿದರು. ಜಿ.ಪಂ. ಸದಸ್ಯೆ ಪುಷ್ಪಾವತಿ ಬಾಳಿಲ, ಸುಳ್ಯ ಕೆಎಸ್ಆರ್ಟಿಸಿ ಸಂಚಾರ ನಿರೀಕ್ಷಕ ಪದ್ಮನಾಭನ್ ಮೇದಿನಡ್ಕ, ಅಕ್ರಮ ಸಕ್ರಮ ಸಮಿತಿ ಸದಸ್ಯ ಸುಧೀರ್ ರೈ ಮೇನಾಲ, ಆನಂದರಾಜ್ ಮೇದಿನಡ್ಕ, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಮೇದಿನಡ್ಕ, ಕಾರ್ಯದರ್ಶಿ ವಿನಾಯಕ ಮೂರ್ತಿ, ಕೋಶಾಧಿಕಾರಿ ವಿನೋದನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಘ್ನೇಶ್ವರ, ಕೋಶಾಧಿಕಾರಿ ನವೀನ್, ಕಾರ್ಯದರ್ಶಿ ನಟೇಶನ್, ಜತೆ ಕಾರ್ಯದರ್ಶಿ ರಾಜಶೇಖರ್ ಮೊದಲಾದವರಿದ್ದರು.
ಸಮ್ಮಾನ ಸಮಾರಂಭ
ವೇ| ಮೂ| ಶಿವಸುಬ್ರಹ್ಮಣ್ಯ ಜೋಯಿಸ ಕರುವಜೆ ಹಾಗೂ ವಾಸ್ತುಶಿಲ್ಪಿ ಪಿ.ಜಿ.ಜಗನ್ನಿವಾಸ ರಾವ್ ಅವರನ್ನು ಸಮ್ಮಾನಿಸಲಾಯಿತು.
ಪ್ರತೀಕ್ಷಾ ಮತ್ತು ಸುಜಿತಾ ಪ್ರಾರ್ಥಿಸಿದರು. ಬ್ರಹ್ಮಕಲಶ ಸಮಿತಿ ಕೋಶಾಧಿಕಾರಿ ಪೆರುಮಾಳ್ ಐವರ್ನಾಡು ಸ್ವಾಗತಿಸಿದರು. ಯೋಗನಾಥ್ ವಂದಿಸಿದರು. ಕನ್ನದಾಸನ್, ರಮೇಶ್ ಮೇದಿನಡ್ಕ ನಿರೂಪಿಸಿದರು.