Home ಧಾರ್ಮಿಕ ಸುದ್ದಿ ಮೇ 4- 7: ಈರಿ ಆದಿ ಶ್ರೀ ಕೋರ್ಧಬ್ಬು ದೈವಸ್ಥಾನದಲ್ಲಿ ನೇಮ

ಮೇ 4- 7: ಈರಿ ಆದಿ ಶ್ರೀ ಕೋರ್ಧಬ್ಬು ದೈವಸ್ಥಾನದಲ್ಲಿ ನೇಮ

223
0
SHARE

ಮಹಾನಗರ: ನಗರದ ಶೇಡಿಗುರಿಯ ಈರಿ ಆದಿ ಶ್ರೀ ಕೋಡ್ದರ್ಬ್ಬು ದೈವಸ್ಥಾನದಲ್ಲಿ ವರ್ಷಾವಧಿ ನೇಮ ಮೇ 4ರಿಂದ 7ರ ತನಕ ನಡೆಯಲಿದೆ.

ಮೇ 4ರಂದು ಬೆಳಗ್ಗೆ 11ಕ್ಕೆ ಭಂಡಾರ ಏರುವುದು, ರಾತ್ರಿ 7ಕ್ಕೆ ಗುಳಿಗ ದೈವದ ಮತ್ತು 10 ಗಂಟೆಗೆ ಬಬ್ಬುಸ್ವಾಮಿ ಮತ್ತು ತನ್ನಿಮಾನಿಗ ದೈವಗಳ ನೇಮ, ಮೇ 5ರಂದು ಸಂಜೆ 4ಕ್ಕೆ ರಾಹುಗುಳಿಗ ಮತ್ತು ರಾತ್ರಿ 10 ಗಂಟೆಗೆ ವರಾಹ ಮೂರ್ತಿ ಪಂಜುರ್ಲಿ ಮತ್ತು ಬಂಟ ದೈವಗಳ ನೇಮ, ಮೇ 6ರಂದು ರಾತ್ರಿ 7ಕ್ಕೆ ಪಿಲಿ ಚಾಮುಂಡಿ ಮತ್ತು ಪರಿವಾರ ದೈವಗಳ ಮತ್ತು 9 ಗಂಟೆಗೆ ಕೊರಗಜ್ಜ ದೈವದ ನೇಮ ಜರಗುವುದು.

ಮೇ 7ರಂದು ಬೆಳಗ್ಗೆ 9 ಗಂಟೆಗೆ ಭಂಡಾರ ಇಳಿಯುವ ಕಾರ್ಯಕ್ರಮವಿದೆ ಎಂದು ದೈವಸ್ಥಾನದ ಪತ್ರಿಕಾ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here