ಕಟಪಾಡಿ: ಮಟ್ಟು ಶ್ರೀ ಬ್ರಹ್ಮ ಮುಗ್ಗೇರ್ಕಳ ದೈವಸ್ಥಾನ ಇದರ ದ್ವಿವಾರ್ಷಿಕ ನೇಮೋತ್ಸವವು ಸಂಪನ್ನಗೊಂಡಿತು.
ಆ ಪ್ರಯುಕ್ತ ಹಸಿರು ಹೊರೆ ಕಾಣಿಕೆ, ಭಂಡಾರ ಪ್ರವೇಶ, ಮಹಾ ಅನ್ನಸಂತರ್ಪಣೆ, ಶ್ರೀ ಬ್ರಹ್ಮರ ಉತ್ಸವ ಹಾಗೂ ಶ್ರೀ ದೈವಗಳಿಗೆ ನೈವೇದ್ಯ ಸಮರ್ಪಣೆ, ದರ್ಶನ ಸೇವೆ ಶ್ರೀ ಬ್ರಹ್ಮರ ಬೀರ, ಪ್ರಸಾದ ವಿತರಣೆ, ಶ್ರೀ ಮುಗ್ಗೇರ್ಕಳ ನೇಮೋತ್ಸವ. ಶ್ರೀ ಶಕ್ತಿ ಸ್ವರೂಪಿಣಿ ತನ್ನಿಮಾನಿಗ ನೇಮೋತ್ಸವ. ಗುಳಿಗ ಕೋಲ, ಜುಮಾದಿ ಬಂಟರ ನೇಮೋತ್ಸವವು ನಡೆಯಿತು.
ಈ ಸಂದರ್ಭ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಸುರೇಶ್ ಶೆಟ್ಟಿ ಗುರ್ಮೆ, ದೇವದಾಸ್ ಹೆಬ್ಟಾರ್ ಕಟ್ಟಿಂಗೇರಿ, ಲಕ್ಷ್ಮೀ ನಾರಾಯಣ ರಾವ್, ಸುಧಾಕರ್ ಡಿ. ಅಮೀನ್ ಪಾಂಗಾಳ ಗುಡ್ಡೆ, ದಯಾನಂದ ವಿ. ಬಂಗೇರ, ಪರಮೇಶ್ವರ ಅಧಿಕಾರಿ, ಬಲರಾಮ್ ರಾವ್, ಗಣೇಶ್ ಕುಮಾರ್ ಮಟ್ಟು, ಚಂದ್ರಶೇಖರ್, ಲಕ್ಷ್ಮಣ್, ರವಿ ಕೋಟ್ಯಾನ್, ರವಿ ಶ್ರೀಯಾನ್ ಕಲ್ಮಾಡಿ, ರಮೇಶ್ ಮೆಂಡನ್ ಮಲ್ಪೆ, ವಾಮನ ಮೆಂಡನ್, ದೈವಸ್ಥಾನದ ಗುರಿಕಾರ ನಾಗರಾಜ್, ಕಾರ್ಯದರ್ಶಿ ಗುರುರಾಜ್ ಜಿ.ಎಸ್., ಯೋಗೀಶ್ ವಿ.ಎಸ್. ರಾಜಶೇಖರ್ ಜಿ.ಎಸ್., ಜಯಕರ ತಿಂಗಳಾಯ ಕಡೆಕಾರ್, ರವಿ ಶ್ರೀಯಾನ್ ಕಲ್ಮಾಡಿ, ಅಶೋಕ್ ಸುವರ್ಣ, ಕರುಣಾಕರ ಶ್ರೀಯಾನ್, ಹರೀಶ್ ಸಾಲ್ಯಾನ್, ರವಿ ಕೋಟ್ಯಾನ್, ಸುರೇಶ್ ಪಿತ್ರೋಡಿ, ಶಶಿಕುಮಾರ್, ರಮೇಶ್ ಮೆಂಡನ್ ಮಲ್ಪೆ ಮತ್ತಿತರರು ಉಪಸ್ಥಿತರಿದ್ದರು.