ಉಪ್ಪುಂದ: ಮಟ್ನಕಟ್ಟೆ ಶ್ರೀ ಜಟ್ಟಿಗೇಶ್ವರ ದೈವಸ್ಥಾನದ ನೂತನ ಗರ್ಭಗುಡಿಯ ಪುನರ್ಬಿಂಬ ಪ್ರತಿಷ್ಠೆ, ಅಷ್ಠಬಂಧ, ಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಜಟ್ಟಿಗೇಶ್ವರ, ಹೈಗುಳಿ, ಕೀಳು, ರಾಹು ದೈವಗಳ ಜೀರ್ಣೋದ್ಧಾರ, ಪುನಃಪ್ರತಿಷ್ಠೆ ಮತ್ತು ನಾಗಪ್ರತಿಷ್ಠೆಯ ಕಾರ್ಯಕ್ರಮ ನಡೆಯಿತು.
ಅರ್ಚಕ ಎಂ.ಕೆ.ಹೆಬ್ಟಾರ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಕ್ರಮ ನಡೆದವು. ಸಮಿತಿ ಅಧ್ಯಕ್ಷ ಚಂದ್ರ ದೇವಾಡಿಗ ಹಾಗೂ ಸಮಿತಿ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.