Home ಧಾರ್ಮಿಕ ಸುದ್ದಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜ

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜ

2159
0
SHARE

ಪುಂಜಾಲಕಟ್ಟೆ : ಧ.ಗ್ರಾ. ಯೋಜನೆ ಬಂಟ್ವಾಳ ತಾಲೂಕು, ಕಜೆಕಾರು ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನ ಇವರ ಮಾರ್ಗದರ್ಶನದಲ್ಲಿ ಪ್ರಗತಿ ಬಂಧು
ಒಕ್ಕೂಟ ಬಡಗಕಜೆಕಾರು, ಮಾಡಪಲ್ಕೆ, ತೆಂಕಕಜೆಕಾರು ಇದರ ಸಹಯೋಗದಲ್ಲಿ ಪ್ರಧಾನ ಅರ್ಚಕ ನಾರಾಯಣ ಅಡಿಗ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನದಲ್ಲಿ ಆ. 26ರಂದು ಜರಗಿತು.

ಧಾರ್ಮಿಕ ಉಪನ್ಯಾಸ ನೀಡಿದ ತುಳು ಜಾನಪದ ವಿದ್ವಾಂಸ ಕೆ.ಕೆ. ಪೇಜಾವರ ಅವರು, ತುಳುನಾಡು ದೈವ-ದೇವರ, ನಾಗಾ ರಾಧನೆಯ ನಂಬಿಕೆಯ ಸ್ಥಳವಾಗಿದ್ದು,
ಧಾರ್ಮಿಕ ಭಾವನೆಯಿಂದ ಜನರನ್ನು ಒಗ್ಗೂಡಿಸುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ದೂರದರ್ಶಿತ್ವದಿಂದ ಯೋಜನೆಯ ಕಾರ್ಯಗಳು ಜನತೆಗೆ ಬೆಳಕಾಗಿವೆ. ಯೋಜನೆಯಿಂದ ಶ್ರೀ ಸತ್ಯನಾರಾಯಣ ಪೂಜೆಯ ಮೂಲಕ ನಮ್ಮ ಧರ್ಮ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವಾಗುತ್ತಿದೆ ಎಂದು ಹೇಳಿದರು.

ಧ.ಗ್ರಾ. ಯೋಜನೆಯ ಶುದ್ಧ ಗಂಗಾ ಯೋಜನೆ ನಿರ್ದೇಶಕ ಲಕ್ಷ್ಮಣ ಎಂ. ಮುಖ್ಯ ಅತಿಥಿಯಾಗಿ ಮಾತನಾಡಿ, ಯೋಜನೆಯ ಮೂಲಕ ಶುದ್ಧ ಕುಡಿಯುವ ನೀರಿನ ಕಾರ್ಯಕ್ರಮ ನಡೆಯುತ್ತಿದೆ. ಇದು ಕಲುಷಿತ ನೀರನ್ನು ಶುದ್ಧೀಕರಿಸಿ ಜನರಿಗೆ ನೀಡುವ ಈ ಕಾರ್ಯಕ್ರಮ ಸರಕಾರ ಮತ್ತು ಯೋಜನೆ ಮೂಲಕ ನಡೆಯುತ್ತಿದೆ. ಕಲುಷಿತ ನೀರನ್ನು ಕುಡಿದರೆ ಆರೋಗ್ಯಕ್ಕೆ ಬಹಳ ಹಾನಿಕಾರಕವಾಗಿ ರೋಗ-ರುಜಿನಗಳು ಬರುವ ಸಾಧ್ಯತೆ ಇರುವುದರಿಂದ ಜನರು ಜಾಗೃತರಾಗಬೇಕು ಎಂದು ಹೇಳಿದರು.

ಮಂಗಳೂರು ಗೋರಿಗುಡ್ಡೆ ಕಿಟ್ಟಲ್‌ ಮೆಮೋರಿಯಲ್‌ ಪಿಯು ಕಾಲೇಜು ಪ್ರಾಂಶುಪಾಲ ವಿಠಲ ಅಬುರ ಅವರು ಮಾತನಾಡಿ, ಬಸವಣ್ಣನ ನೀತಿಯಂತೆ ಪ್ರತಿಯೊಬ್ಬರ ಬದುಕಿನಲ್ಲಿ ಕಾಯಕವೇ ಕೈಲಾಸವಾಗಬೇಕು. ಈಗಿನ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮತ್ತು ಶಿಕ್ಷಣ ಪ್ರಜ್ಞೆ ಮೂಡಿಸಬೇಕು. ಧಾರ್ಮಿಕ ಕಾರ್ಯಕ್ರಮದ ಒಟ್ಟಿಗೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು.

ಬಡಗಕಜೆಕಾರು ಗ್ರಾ.ಪಂ. ಅಧ್ಯಕ್ಷ ವಜ್ರ ಪೂಜಾರಿ ಬಾರೊªಟ್ಟು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರಾದ ಎಂ. ತುಂಗಪ್ಪ ಬಂಗೇರ, ಬಿ. ಪದ್ಮಶೇಖರ ಜೈನ್‌,
ಮಂಗಳೂರು ಉದ್ಯಮಿ ಭುವನೇಶ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಹರಿಶ್ಚಂದ್ರ ಪೂಜಾರಿ, ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನದ ನಿಕಟಪೂರ್ವ ಆಡಳಿತ ಮೊಕ್ತೇಸರ ಯಶೋಧರ ಪೂಜಾರಿ, ಧ.ಗ್ರಾ. ಯೋಜನೆ ವಗ್ಗ ವಲಯ ಮೇಲ್ವಿಚಾರಕಿ ನಳಿನಾಕ್ಷಿ, ಬಡಗಕಜೆಕಾರು ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ಉಮೇಶ್‌ ಪಾಲನೆ, ಮಾಡಪಲ್ಕೆ ಒಕ್ಕೂಟ
ಅಧ್ಯಕ್ಷ ದಿನೇಶ್‌ ಪಾರೊಟ್ಟು, ತೆಂಕಕಜೆಕಾರು ಒಕ್ಕೂಟ ಅಧ್ಯಕ್ಷ ಲಕ್ಷ್ಮಣ ಮೂಲ್ಯ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಪ್ರವೀಣ್‌ ಅಬುರ, ಭಜನ ಮಂಡಳಿ ಅಧ್ಯಕ್ಷ ವಸಂತ ಮಡಿವಾಳ, ಮಹೇಶ್ವರಿ ಯುವತಿ ಮಂಡಳಿಯ ಅಧ್ಯಕ್ಷೆ ವಿಶಾಲಾಕ್ಷಿ , ಶಿವಶಕ್ತಿ ಫ್ರೆಂಡ್ಸ್‌ ಅಧ್ಯಕ್ಷ ಜಗದೀಶ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಚಾರ್ಟರ್ಡ್‌ ಅಕೌಂಟ್ಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಶಶಿಧರ ಕಜೆಕಾರು ಅವರನ್ನು ಸಮ್ಮಾನಿಸಲಾಯಿತು.

ಪ್ರಕಾಶ್‌ ಕರ್ಲ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಸುಧಾ ರೈ ವಂದಿಸಿದರು. ದೇವದಾಸ ಅಬುರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here