Home ಧಾರ್ಮಿಕ ಸುದ್ದಿ ಮರೋಳಿ ವಾರ್ಷಿಕ ಜಾತ್ರೆ: ರಥೋತ್ಸವ

ಮರೋಳಿ ವಾರ್ಷಿಕ ಜಾತ್ರೆ: ರಥೋತ್ಸವ

ಶ್ರೀ ದೇವರ ಬಲಿ ನಡೆದು ರಥಾರೋಹಣ ನಡೆಯಿತು.

1497
0
SHARE

ಮಹಾನಗರ: ಇತಿಹಾಸ ಪ್ರಸಿದ್ಧ ಮರೋಳಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಹಿತ ವಿಜೃಂಭಣೆಯ ರಥೋತ್ಸವ ನಡೆಯಿತು. ಈ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶಶನ ಪಡೆದು ಕಣ್ತೊಂಬಿಕೊಂಡರು.

ರಥೋತ್ಸವದ ಅಂಗವಾಗಿ ಬೆಳಗ್ಗೆ ಉಷಾಪೂಜೆ, ಗಣಪತಿ ಹವನ, ಶ್ರೀ ದೇವರ ಬಲಿ, ನವಕ ಕಲಶಾಭಿಷೇಕ, ರಥಕಲಶ, ಮಧ್ಯಾಹ್ನ ಮಹಾಪೂಜೆ, ಬಲಿ, ರಥಾರೋಹಣ, ರಥೋತ್ಸವ ನಡೆಯಿತು. ಸಂಜೆ ರಥೋತ್ಸವ, ರಥಾವರೋಹಣ, ನೃತ್ಯ ಬಲಿ ಜರಗಿತು.

ಜ. 25ರಂದು ಬೆಳಗ್ಗೆ ಕವಾಟೋದ್ಘಾಟನೆ, ತೈಲಾಭ್ಯಂಜನ, ಉಷಾಪೂಜೆ, ಗಣಪತಿ ಹವನ, ತುಲಾಭಾರ ಸೇವೆಗಳು, ಮಧ್ಯಾಹ್ನ ಮಹಾಪೂಜೆ, ಶ್ರೀ ದೇವರ ಬಲಿ, ಸಂಜೆ ಅವಭೃಥ ಸ್ನಾನ, ಅರಾಟ ಬಲಿ, ಓಕುಳಿ, ಸವಾರಿ, ಕಟ್ಟೆಪೂಜೆ, ರಾತ್ರಿ ಧ್ವಜಾವರೋಹಣ, ಕಲಶಾಭಿಷೇಕ ಕಾರ್ಯಕ್ರಮಗಳು ಜರಗಲಿದೆ.

 

LEAVE A REPLY

Please enter your comment!
Please enter your name here