
ಪುತ್ತೂರು: ಇಲ್ಲಿನ ಸೇಕ್ರೆಡ್ ಹಾರ್ಟ್ ಚರ್ಚ್ನಲ್ಲಿ ಚರ್ಚ್ ವ್ಯಾಪ್ತಿಯ 52 ಮಂದಿಗೆ ಪವಿತ್ರಾತ್ಮಕ ಮುದ್ರೆಯ ದೃಢೀಕರಣ ಸಂಸ್ಕಾರ ನೀಡಲಾಯಿತು.
ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ವಂ| ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ದೃಢೀಕರಣ ಸಂಸ್ಕಾರದ ಪ್ರಯುಕ್ತ ದಿವ್ಯ ಬಲಿಪೂಜೆ ನೆರವೇರಿಸಿ, 52 ಮಂದಿಗೆ ಪವಿತ್ರಾತ್ಮಕ ಮುದ್ರೆಯ ದೃಢೀಕರಣ ಸಂಸ್ಕಾರವನ್ನು ನೀಡಿದರು.
ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷರ ಕಾರ್ಯದರ್ಶಿ ವಂ| ರೋಹನ್ ಲೋಬೋ, ಯುಎಸ್ಎ ಡೆನ್ವರ್ ಧರ್ಮಪ್ರಾಂತದ ವಂ| ಐವನ್ ಮೊಂತೆರೊ, ತಿಪಟೂರ್ ಸಂತ ಜೋಸೆಫ್ ಚರ್ಚ್ನ ವಂ| ಜಾನ್ ಪ್ರಕಾಶ್ ಪಿರೇರಾ, ಮರೀಲು ಸೇಕ್ರೆಡ್ ಹಾರ್ಟ್ ಚರ್ಚ್ನ ಪ್ರಧಾನ ಧರ್ಮಗುರು ವಂ| ವಲೇರಿಯನ್ ಫ್ರ್ಯಾಂಕ್ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಚರ್ಚ್ ಪಾಲನ ಮಂಡಳಿ ಕಾರ್ಯದರ್ಶಿ ಲಿಗೋರಿ ಸೆರಾವೋ, ಚರ್ಚ್ ಪಾಲನ ಸಮಿತಿ ಸದಸ್ಯರು, ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು, ಧರ್ಮಭಗಿನಿಯರು, ವಿವಿಧ ವಾಳೆಗಳ ಗುರಿಕಾರರು ಹಾಗೂ ಚರ್ಚ್ ವ್ಯಾಪ್ತಿಯ ಕ್ರೈಸ್ತ ಬಾಂಧವರು ದಿವ್ಯ ಬಲಿಪೂಜೆಯಲ್ಲಿ ಉಪಸ್ಥಿತರಿದ್ದರು.