ಕಡಬ : ಮರ್ದಾಳದ 102 ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ಶ್ರೀ ಷಣ್ಮುಖ ಸುಬ್ರಾಯ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು.
ಸೋಮವಾರ ಪೂರ್ವಾಹ್ನ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಅಪರಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಜರಗಿತು. ರಾತ್ರಿ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ರಂಗಪೂಜೆ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಜರಗಿತು. ಮಂಗಳವಾರ ಬೆಳಗ್ಗೆ ಮಹಾಗಣಪತಿ ಹವನ, ಪಂಚಗವ್ಯಾ ಭಿಷೇಕ, ಪಂಚ ವಿಂಶತಿ ಕಲಶಾಭಿಷೇಕ, ಪರಿವಾರ ದೈವಗಳಿಗೆ ತಂಬಿಲ, ನಾಗ ತಂಬಿಲ ಜರಗಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಜರಗಿತು. ರಾತ್ರಿ ಪರಿವಾರ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ, ಬಳಿಕ ಶ್ರೀ ದುರ್ಗಾಪೂಜೆ, ಶ್ರೀ ಭೂತ ಬಲಿ ಮಹೋತ್ಸವ, ಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಹೊರಾಂಗಣ ಪ್ರಸಾದ, ವೈದಿಕ ಮಂತ್ರಾಕ್ಷತೆ, ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ ನೆರವೇರಿತು. ಅನಂತರ ದೈವಗಳ ನೇಮ, ಕೋಲ ಬಲಿ, ಶ್ರೀಮುಡಿ ಗಂಧಪ್ರಸಾದ ವಿತರಣೆ ನಡೆಯಿತು. ಬುಧವಾರ ಬೆಳಗ್ಗೆ ಹರಕೆ ಸೇವೆ, ಶ್ರೀಮುಡಿ ಗಂಧಪ್ರಸಾದ ಜರಗಿ ಅನಂತರ ಬಲಿ ಪೀಠದಲ್ಲಿ ಬಲಿ ನಡೆಯುವುದರೊಂದಿಗೆ ಉತ್ಸವ ಸಮಾಪನಗೊಂಡಿತು. ದೇವಳದ ಅರ್ಚಕ ರಾಘವೇಂದ್ರ ಕೆದಿಲಾಯ ಅವರು ವೈದಿಕ ವಿಧಿಗಳಲ್ಲಿ ಸಹಕರಿಸಿದರು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕಲ್ಪುರೆ ನಾರಾಯಣ ಭಟ್, ವಿಜಯಕುಮಾರ್ ರೈ ಕರ್ಮಾಯಿ, ಜನಾರ್ದನ ಗೌಡ ಪುತ್ತಿಲ, ಸಾಂತಪ್ಪ ಗೌಡ ಕೆ. ಕೋಲಂಯಡಿ, ಲಾವಣ್ಯಾ ಯು. ನಡುಕೈಯೊಳೆ, ವಿಶಾಲಾಕ್ಷಿ ಡೆಪ್ಪುಣಿ, ಸುಂದರ ನಿಂತಿಕಲ್ಲು, ಉತ್ಸವ ಸಮಿತಿಯ ಅಧ್ಯಕ್ಷ ಕರುಣಾಕರ ರೈ, ಕಾರ್ಯದರ್ಶಿ ಚಂದ್ರಶೇಖರ ಗೌಡ ಅಚ್ಚಿಮನೆ, ಕೋಶಾಧಿ ಕಾರಿ ಹರೀಶ್ ಕೋರಿಯಾರ್, ಉಪಾಧ್ಯಕ್ಷ ಜಗನ್ನಾಥ ರೈ ನೆಕ್ಕಿತ್ತಡ್ಕ, ಪೂರ್ಣಚಂದ್ರ ರೈ ಸಂಪಿಗೆದಡಿ ಉಪಸ್ಥಿತರಿದ್ದರು.