ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ ಹಾಗೂ ಶ್ರೀ ಮಹಿಷಮರ್ದಿನಿ ದೇವಿ ಸನ್ನಿಧಿಯಲ್ಲಿ ಮಾ. 2ರಂದು ‘ಶ್ರೀಮನ್ಮಹಾರಥೋತ್ಸವ’ ಜರಗಲಿದೆ.
ತತ್ಸಂಬಂಧ ಫೆ. 27ರ ರಾತ್ರಿ ಅಂಕುರಾರೋಹಣ, ಫೆ. 28ರ ಬೆಳಗ್ಗೆ ಸಾಮೂಹಿಕ ಗಣಹೋಮ, ಕಲಶಾಭಿಷೇಕ, ರಾತ್ರಿ ಬೈಗಿನ ಬಲಿ, ಚಂದ್ರಮಂಡಲ ರಥೋತ್ಸವ, ಮೂಡುರಸ್ತೆ ಕಟ್ಟೆಪೂಜೆ, ದೊಡ್ಡ ರಂಗಪೂಜೆ, ಮಾ. 1ರ ಬೆಳಗ್ಗೆ ಆಶ್ಲೇಷಾಬಲಿ, ದುರ್ಗಾ ಹೋಮ, ಬೊಳ್ಜಿ ರಸ್ತೆ ಕಟ್ಟೆಪೂಜೆ, ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಾ. 2: ಪರ್ಕಳ ರಥೋತ್ಸವ ನೆರವೇರಲಿದೆ.
ಮಾ. 2ರ ಮಧ್ಯಾಹ್ನ ರಥಾರೋಹಣ, ಅನ್ನಸಂತರ್ಪಣೆ, ಮೌತ್ ಆರ್ಗನ್, ಕೊಳಲು ವಾದನ, ಜಾನಪದ, ಭಕ್ತಿಗೀತೆ, ಸಂಜೆ 4ರಿಂದ ಯಕ್ಷಗಾನ ಪ್ರದರ್ಶನ, ರಾತ್ರಿ 8ಕ್ಕೆ ವಿವಿಧ ಆಕರ್ಷಣೆಗಳೊಂದಿಗೆ ರಥೋತ್ಸವ, ಮಾ. 3ರ ಬೆಳಗ್ಗೆ ತುಲಾಭಾರಾದಿ ಸೇವೆ, ಹುಲಿ ಚಾಮುಂಡಿ ದರ್ಶನ, ಓಕುಳಿ, ರಾತ್ರಿ 12.30ಕ್ಕೆ ದೇವರ ಕಟ್ಟೆಯಿಂದ ಪಂಜಿನ ಮೆರವಣಿಗೆ, ಶ್ರೀ ವ್ಯಾಘ್ರ ಚಾಮುಂಡಿ ಕೋಲ, ಮಾ. 4ರಂದು ಮಹಾ ಸಂಪ್ರೋಕ್ಷಣೆ, ರಾತ್ರಿ ಮಾರಿ ನಡೆಯಲಿದೆ ಎಂದು ದೇಗುಲದ ಆಡಳಿತ ವ್ಯ.ಸ. ಅಧ್ಯಕ್ಷ ಪಿ. ಶ್ರೀನಿವಾಸ ಉಪಾಧ್ಯ ತಿಳಿಸಿದ್ದಾರೆ.