ಕೊಲ್ಲೂರು: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸತತ 3ದಿನಗಳ ಕಾಲ ನಡೆಯುತ್ತಾ ಬಂದಿರುವ ಮಕರ ಸಂಕ್ರಮಣ ಉತ್ಸವದ ಸಮಾಪನಾ ಕಾರ್ಯಕ್ರಮ ಜ.16ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಡನೆ ಜರುಗಿತು.
ಜ.16ರಂದು ದೇಗುಲದಲ್ಲಿ ಬೆಳಗ್ಗೆ ಮಹಾಮಂಗಳಾರತಿಯ ಅನಂತರ ಮಂಡಲ ಸೇವೆ ಹಾಗೂ ಕಡಬು ನೈವೇದ್ಯ ನಡೆಯಿತು.
ವಿವಿಧ ತಾಲೂಕುಗಳಿಂದ ಆಗಮಿಸಿದ ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಳೆದ 3 ದಿನಗಳಿಂದ ಸುಮಾರು 1.5 ಲಕ್ಷ ಭಕ್ತರು ಸೇವೆಗೆಂದು ಆಗಮಿಸಿದರು. ಇಲ್ಲಿ ಬ್ರಹ್ಮಲಿಂಗೇಶ್ವರ ದೇವರಲ್ಲದೇ ಯಕ್ಷ, ಚಿಕ್ಕಮ್ಮ, ಹಾೖಗುಳಿ, ಹುಲಿ ದೇವರ ಸೇವೆಗೆಂದು ನಾನಾ ಕಡೆಯಿಂದ ಭಕ್ತರು ಆಗಮಿಸಿರುವುದು ವಿಶೇಷ.