ಮಾರಣಕಟ್ಟೆ: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದ ಮಕರ ಸಂಕ್ರಮಣ ಉತ್ಸವ ಜ. 15ರಿಂದ ಜ. 17ರ ತನಕ ನಡೆಯಲಿದೆ.
ಜ. 15ರ ಮಧ್ಯಾಹ್ನ 12ಕ್ಕೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿ ಧಿಯಲ್ಲಿ ಮಹಾ ಮಂಗಳಾರತಿ ನಡೆಯಲಿದೆ. ಜ. 16 ಮತ್ತು 17ರಂದು ಬೆಳಗ್ಗೆ 9.30ಕ್ಕೆ ಮಹಾ ಮಂಗಳಾರತಿ ನಡೆದ ಬಳಿಕ ಮಂಡಲ ಸೇವೆ ಇದೆ.
ಈ ಸಂದರ್ಭ ಬುಟ್ಟಿಯಲ್ಲಿ ಸೇವಂತಿಗೆ ಮತ್ತು ಸಿಂಗಾರ ಕೊನೆ
ಯನ್ನು ತುಂಬಿಸಿ ತಲೆಹೊರೆಯಾಗಿ ಶ್ರೀ ದೇವರಿಗೆ ಹರಕೆಯ ಕಾಣಿಕೆ ರೂಪದಲ್ಲಿ ಸಮರ್ಪಿಸುವುದು ಮಹತ್ವ ಪಡೆದಿದೆ.