ಸುಳ್ಯ : ಜಾಲ್ಸೂರು ಬಳಿಯ ಮಾಪಳಡ್ಕ ದರ್ಗಾ ಶರೀಫ್‌ನಲ್ಲಿ ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಮಾಪಳಡ್ಕ ದರ್ಗಾ ಶರೀಫ್ ಆವರಣದಲ್ಲಿ ಉದ್ಘಾಟನೆಗೊಂಡಿತು. ಅಬ್ದುಲ್ ಖಾದಿರ್ ಅಸ್ಸಖಾಫ್ ಟಿ.ವಿ. ಉಂಬು ತಂಙಳ್ ದುವಾ ನೆರವೇರಿಸಿದರು. ಸಂಜೆ ಉರೂಸ್‌ಗೆ ಚಾಲನೆ ನೀಡಲಾಯಿತು. ತಾಹ ಹುದವಿ ಮುಖ್ಯ ಪ್ರಭಾಷಣಗೈದರು.
ದುವಾ ನೇತೃತ್ವವನ್ನು ಎನ್.ಪಿ.ಎಂ. ಶರಫುದ್ದೀನ್ ತಂಙಳ್ ಅಲ್ ಹಾದಿ ಕುನ್ನುಂಗೈ ವಹಿಸಿದ್ದರು. ವೇದಿಕೆಯಲ್ಲಿ ಬಿ.ಜೆ.ಎಂ. ಇರುವಂಬಳ್ಳ ಮಾಪಳಡ್ಕ ದರ್ಗಾ ಶರೀಫ್ ಅಧ್ಯಕ್ಷ ಐ.ಎಂ. ಅಬೂಬಕ್ಕರ್, ಮಾಪಳಡ್ಕ ಮುದರ್ರಿಸ್ ತೌಸೀಫ್ ಸಅದಿ, ಅಬ್ದುಲ್ ಅಝೀಝ್ ಮುಸ್ಲಿಯಾರ್, ಸಮಿತಿ ಗೌರವಾಧ್ಯಕ್ಷ ಎಸ್. ಇಬ್ರಾಹಿಂ ಸಂಕೇಶ, ಉಪಾಧ್ಯಕ್ಷ ಎ.ಬಿ. ಅಶ್ರಫ್ ಸಅದಿ ಉಪಸ್ಥಿತರಿದ್ದರು.
ಕೆ.ಪಿ. ಹಸೈನಾರ್ ಮದನಿ ಸ್ವಾಗತಿಸಿ, ತೌಸೀಫ್ ಸಅದಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಟಿ.ಎಚ್. ಮಹಮ್ಮದ್ ಕುಂಞಿ, ಕಾರ್ಯದರ್ಶಿ ಪೋಕರ್ ಕೇನಾಜೆ, ಕೋಶಾಧಿಕಾರಿ ಬೀರಾನ್ ಹಾಜಿ, ಉಪಾಧ್ಯಕ್ಷ ಹಸೈನಾರ್, ಕಾರ್ಯದರ್ಶಿ ಅಂದುಂಞಿ ಗೋರಡ್ಕ ಸಹಕರಿಸಿದರು.