Home ಧಾರ್ಮಿಕ ಸುದ್ದಿ ಮಣಿಪುರ : ಬಲಮುರಿ ಮಹಾಗಣಪತಿಗೆ ಸಾನ್ನಿಧ್ಯ ಕಲಶಾಭಿಷೇಕ ಸಂಪನ್ನ ಇಂದು ಅಷ್ಟಬಂಧ ಬ್ರಹ್ಮಕಲಶೋತ್ಸವ,ಶ್ರೀ ರಂಗಪೂಜಾ ಮಹೋತ್ಸವ

ಮಣಿಪುರ : ಬಲಮುರಿ ಮಹಾಗಣಪತಿಗೆ ಸಾನ್ನಿಧ್ಯ ಕಲಶಾಭಿಷೇಕ ಸಂಪನ್ನ ಇಂದು ಅಷ್ಟಬಂಧ ಬ್ರಹ್ಮಕಲಶೋತ್ಸವ,ಶ್ರೀ ರಂಗಪೂಜಾ ಮಹೋತ್ಸವ

1251
0
SHARE

ಕಟಪಾಡಿ: ಮಣಿಪುರ ಪಡುಕಲ್ಮಂಜೆ ಶ್ರೀ ಮಹಾಲಿಂಗೇಶ್ವರ ಶ್ರೀ ಬಲಮುರಿ ಶ್ರೀ ಮಹಾಗಣಪತಿ ದೇವರ ಪುನಃ ಪ್ರತಿಷ್ಠಾ ರಜತ ಮಹೋತ್ಸವದ ಅಂಗ ವಾಗಿ ರಾಜ್ಯ ಧಾರ್ಮಿಕ ಪರಿಷತ್‌ ಇದರ ಆಗಮ ಪಂಡಿತ ಎಲ್ಲೂರು ಸೀಮೆಯ ಬ್ರಹ್ಮಶ್ರೀ ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ವೇ|ಮೂ| ಕುತ್ಯಾರು ಗೋಪಾಲಕೃಷ್ಣ ತಂತ್ರಿ ಹಾಗೂ ಪ್ರಧಾನ ಅರ್ಚಕ ವೇ|ಮೂ| ಕಲ್ಮಂಜೆ ವೇದವ್ಯಾಸ ಉಪಾಧ್ಯಾಯರ ಸಹಕಾರದೊಂದಿಗೆ ಆಗಮೋಕ್ತ ವಿಧಿವಿಧಾನದೊಂದಿಗೆ ಶ್ರೀ ಬಲಮುರಿ ಮಹಾಗಣಪತಿ ದೇವರಿಗೆ 108 ಕಲಶಸಹಿತ ಸಾನ್ನಿಧ್ಯ ಕಲಶಾಭಿಷೇಕ ಜರಗಿತು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವೈ. ಸಖಾರಾಮ ಶೆಟ್ಟಿ, ಆಡಳಿತ ಮೊಕ್ತೇಸರ ಎಂ. ಪ್ರಕಾಶ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ ಆಚಾರ್ಯ, ಉಪಾಧ್ಯಕ್ಷ
ದಯಾನಂದ ಶೆಟ್ಟಿ, ಸ್ಥಳವಂದಿಗರು, ಊರ ಪರವೂರ ಹತ್ತು ಸಮಸ್ತರು ಭಗವದ್ಭಕ್ತರು ಉಪಸ್ಥಿತರಿದ್ದರು. ಇಂದು ಬ್ರಹ್ಮಕಲ ಶೋತ್ಸವ ಫೆ. 24ರಂದು ಬೆಳಗ್ಗೆ 11.22ಕ್ಕೆ‌ ಅಷ್ಟಬಂಧ ಬ್ರಹ್ಮಕಲಶೋತ್ಸವ ಅನ್ನ ಸಂತರ್ಪಣೆ, ರಂಗಪೂಜೆ ಜರಗಲಿದೆ.

ಧಾರ್ಮಿಕ ಸಭೆ
ಸಂಜೆ 5.30 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಅದಮಾರು ಮಠದ ಕಿರಿಯ ಸ್ವಾಮೀಜಿ ಶ್ರೀ ಈಶಪ್ರಿಯ ತೀರ್ಥರು ಆಶೀರ್ವಚನ ನೀಡಲಿದ್ದು, ಜಾನಪದ ವಿದ್ವಾಂಸ ಕೆ. ಎಲ್‌. ಕುಂಡಂತಾಯ ಶುಭಾಶಂಸನೆ, ರಾಜ್ಯ ಧಾರ್ಮಿಕ ಪರಿಷತ್‌ ಆಗಮ ಪಂಡಿತ ಬ್ರಹ್ಮಶ್ರೀ ಕುತ್ಯಾರು ಕೇಂಜ ಶ್ರೀಧರ ತಂತ್ರಿ ಧಾರ್ಮಿಕ ಪ್ರವಚನ ನೀಡಲಿರುವರು.

ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಅಧ್ಯಕ್ಷತೆಯಲ್ಲಿ ಜರಗಲಿದ್ದು, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

LEAVE A REPLY

Please enter your comment!
Please enter your name here