Home ಧಾರ್ಮಿಕ ಸುದ್ದಿ ಶ್ರೀ ಬಬ್ಬುಸ್ವಾಮಿ ದೈವಸ್ಥಾನ: ಮಣಿಪಾಲದಲ್ಲಿ ಸಿರಿಸಿಂಗಾರದ ನೇಮ

ಶ್ರೀ ಬಬ್ಬುಸ್ವಾಮಿ ದೈವಸ್ಥಾನ: ಮಣಿಪಾಲದಲ್ಲಿ ಸಿರಿಸಿಂಗಾರದ ನೇಮ

832
0
SHARE
ಮಣಿಪಾಲ: ಸಿರಿಸಿಂಗಾರದ ನೇಮದ ಪ್ರಯುಕ್ತ ಪಲ್ಲಪೂಜೆ ನೆರವೇರಿತು.

ಉಡುಪಿ: ಮಣಿಪಾಲದ ಜಾಗೃತ ಸ್ಥಾನವೆಂದೇ ಪ್ರಸಿದ್ಧವಾದ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಸಿರಿಸಿಂಗಾರದ ನೇಮದ ಪ್ರಯುಕ್ತ ಶನಿವಾರ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.

ಕಾರ್ಯಕಾರಿ ಸಮಿತಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಉದ್ಯಮಿ ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರು, ಗುರಿಕಾರರು, ಗಣ್ಯರು, ಗ್ರಾಮದ ಹತ್ತು ಸಮಸ್ತರು ಮತ್ತು ಭಕ್ತರ ಉಪಸ್ಥಿತಿಯಲ್ಲಿ ಪಲ್ಲಪೂಜೆ ನೆರವೇರಿತು.

ದೈವಸ್ಥಾನದ ಎದುರಿನ ಮೈದಾನದಲ್ಲಿ ಅನ್ನ ಪ್ರಸಾದಕ್ಕೆ ವ್ಯವಸ್ಥೆಗೊಳಿಸಲಾಗಿತ್ತು. ನೇಮದ ಅಂಗವಾಗಿ ವಿವಿಧ ಧಾರ್ಮಿಕ ಕಟ್ಟುಕಟ್ಟಳೆಗಳೊಂದಿಗೆ ವರ್ಧಂತಿ ಆಚರಣೆ, ಭಂಡಾರ ಮೆರವಣಿಗೆ, ಶ್ರೀ ಬಬ್ಬುಸ್ವಾಮಿ ನೇಮ, ಶ್ರೀ ದೇವಿ ತನ್ನಮಾನಿಗ ನೇಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here