Home ಧಾರ್ಮಿಕ ಸುದ್ದಿ ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಾಗಮಂಡಲೋತ್ಸವ

ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಾಗಮಂಡಲೋತ್ಸವ

ಹಸಿರುವಾಣಿ ಹೊರೆಕಾಣಿಕೆ, ದೇವಿಯ ಸ್ವರ್ಣ ಮಂಟಪದ ಮೆರವಣಿಗೆ

1602
0
SHARE
ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಹಾಗೂ ಶ್ರೀ ದುರ್ಗಾಪರಮೇಶ್ವರೀ ದೇವಿಯ ಸ್ವರ್ಣ ಮಂಟಪದ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಮಹಾನಗರ: ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ನೇತೃತ್ವದಲ್ಲಿ ಫೆ. 25ರವರೆಗೆ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲ, ಶ್ರೀನಿವಾಸ ಕಲ್ಯಾಲ, ಪ್ರತಿಷ್ಠಾ ವರ್ಧಂತಿ, ಶ್ರೀ ದೈವಗಳ ನೇಮದ ಪ್ರಯುಕ್ತ ರವಿವಾರ ಬೆಳಗ್ಗೆ ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಹಾಗೂ ಶ್ರೀ ದುರ್ಗಾಪರಮೇಶ್ವರೀ ದೇವಿಯ ಸ್ವರ್ಣ ಮಂಟಪದ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಐತಾಳ್‌ ಅವರು ಶ್ರೀ ದುರ್ಗಾಪರಮೇಶ್ವರೀ ದೇವಿಯ ಸ್ವರ್ಣ ಮಂಟಪಕ್ಕೆ ಪೂಜೆ ನಡೆಸಿ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಮಾಣಿಲದಲ್ಲಿ ನಡೆಯತಕ್ಕಂತಹ ಅಷ್ಟಪವಿತ್ರ ನಾಗಮಂಡಲವು ಅತ್ಯಂತ ಯಶಸ್ವಿಯಾಗಿ ನಡೆಯಬೇಕು.

ಅದಕ್ಕಾಗಿ ಭಕ್ತರು ಸಲ್ಲಿಸಿದ ಹಸಿರುವಾಣಿ ಹೊರೆಕಾಣಿಕೆ ಮತ್ತು ಸ್ವರ್ಣ ಮಂಟಪದ ಮೆರವಣಿಗೆಯು ಯಶಸ್ವಿಯಾಗಿ ವಿಘ್ನರಹಿತವಾಗಿ ಸಾಗಲಿ. ಎಲ್ಲ ಋಣಾತ್ಮಕ ಅಂಶಗಳು ದೂರವಾಗಿ ಧನಾತ್ಮಕ ಅಂಶಗಳು ಪ್ರಜ್ವಲಿಸಲಿ ಎಂದು ಹಾರೈಸಿದರು.

ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಸಂಸದ ನಳಿನ್‌ ಕುಮಾರ್‌ ಕಟೀಲು, ವಿಧಾನ ಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ಡಾ| ಅಣ್ಣಯ್ಯ ಕುಲಾಲ್‌ ಮಂಗಳೂರು, ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಎಸ್‌. ಕೊಟ್ಟಾರಿ, ಚಂದ್ರಶೇಖರ್‌ ಮೂಲ್ಯ ದುಬೈ, ನಾಗಮಂಡಲ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಗೌರವ ಸಲಹೆಗಾರ ತಾರಾನಾಥ ಕೊಟ್ಟಾರಿ, ಕೈಯ್ಯೂರು ನಾರಾಯಣ ಭಟ್‌, ವಾಸುದೇವ ಆರ್‌. ಕೊಟ್ಟಾರಿ ಪಡೀಲ್‌, ಪ್ರಧಾನ ಕಾರ್ಯದರ್ಶಿ ಉಮೇಶ್‌ ಪಿ.ಕೆ. ನಾಗಲಚ್ಚಿಲ್‌, ಕೋಶಾಧಿಕಾರಿ ಭಾಸ್ಕರ ಶೆಟ್ಟಿ ಪುಣೆ, ದಯಾನಂದ ಬಂಗೇರ ಮುಂಬಯಿ, ರಾಜೇಶ್‌ ಪಾಟೀಲ್‌ ಮುಂಬಯಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಮಂಜು ವಿಟ್ಲ, ಆರ್ಥಿಕ ಸಮಿತಿ ಸಂಚಾಲಕ ದಾಮೋದರ ಬಿ.ಎಂ. ಮಾರ್ನಬೈಲ್‌, ಒಡಿಯೂರು ಶ್ರೀಗುರುದೇವ ಸೇವಾ ಬಳಗದ ಮಂಗಳೂರು ಘಟಕದ ಅಧ್ಯಕ್ಷ ಜಯಂತ್‌ ಜೆ. ಕೋಟ್ಯಾನ್‌, ಬಿ.ಕೆ. ಚಂದ್ರಶೇಖರ್‌, ರೂಪೇಶ್‌ ರೈ ಅಳಿಕೆಗುತ್ತು, ರಾಜಶೇಖರ ಶೆಟ್ಟಿ ತಾಳಿಪಡ್ಪು, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಹಾಗೂ ವಿವಿಧ ಭಾಗಗಳ ಶ್ರೀಧಾಮ ಮೊದಲಾದ ಸೇವಾ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here