ವಿಟ್ಲ: ವರಮಹಾಲಕ್ಷ್ಮೀ ವ್ರತಾಚರಣೆಯೆಂದರೆ ಮಾತೃಶಕ್ತಿಯ ಆರಾಧನೆ. ಮಹಾಲಕ್ಷ್ಮಿಯನ್ನು ಆರಾಧಿಸುವುದು, ಯೋಗ್ಯ ಹಾಗೂ ನಿಶ್ಕಲ್ಮಷ ಸೇವೆ ಸಲ್ಲಿಸುವುದು, ಮಹಿಳೆಯರನ್ನು ಗೌರವಿಸುವುದು ಕೂಡ ವ್ರತಾಚರಣೆಯೇ ಆಗಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಮಾಣಿಲ ಶ್ರೀ ಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಸಂದರ್ಭ ಧಾರ್ಮಿಕಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಉದ್ಯಮಿಗಳಾದ ಭಾಸ್ಕರ ಶೆಟ್ಟಿ ಪುಣೆ, ದಯಾನಂದ ಬಂಗೇರ, ದಿನೇಶ್ ಮುಂಬಯಿ, ರಾಜೇಶ್ ಪಾಟೀಲ್ ಮುಂಬಯಿ, ಅರವಿಂದ ರೈ ಪುಣೆ, ದೀಪಾ ಅರವಿಂದ ರೈ, ಉದ್ಯಮಿ ರಾಜಶೇಖರ ಚೌಟ, ಕುಲಾಲರ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್,ವಿಠ್ಠಲ ಶೆಟ್ಟಿ ಸುಣ್ಣಂಬಳ ಉಪಸ್ಥಿತರಿದ್ದರು.
ಸಮಾಜ ಸೇವಕ ಕೃಷಿಕ ಮಹಾಬಲ ಶೆಟ್ಟಿ ನಿಡ್ಡೋಡಿಗುತ್ತು, ರಮಣಿ ದಂಪತಿ ನಲ್ಲೂರು, ನಿವೃತ್ತ ಶಿಕ್ಷಕ ಕೊರಗಪ್ಪ ರೈ ಅರ್ಪಿಣಿಗುತ್ತು, ರತ್ನಾವತಿ ದಂಪತಿ ಕನ್ಯಾನ, ರಾಮಕೃಷ್ಣ ಭಟ್ ದಂಡೆಪ್ಪಾಡಿ, ಸುಜಾತಾ ದಂಪತಿ ಮಾಣಿಲ, ಸಮಾಜ ಸೇವಕ ಹರೀಶ್ ಬೊಟ್ಟಾರಿ ಪೈವಳಿಕೆ ಅವರನ್ನು ಸಮ್ಮಾನಿಸಲಾಯಿತು. ವೆಂಕಟೇಶ್ ಬೆಂಡೆ ಅವರು ಸಿದ್ಧಪಡಿಸಿದ ನಾಗಮಂಡಲ ಕುರಿತ ವೀಡಿಯೋ ಬಿಡುಗಡೆ ಮಾಡಲಾಯಿತು.
ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿ ಅಶೋಕ್ ರೈ ಅರ್ಪಿಣಿ ಗುತ್ತು ಸ್ವಾಗತಿಸಿದರು. ಟ್ರಸ್ಟಿ ಜಯ ರಾಜ್ಪ್ರಕಾಶ್ ಪ್ರಸ್ತಾವಿಸಿದರು. ಮಹಿಳಾ ಸಮಿತಿ ಕಾರ್ಯದರ್ಶಿ ಗೀತಾ ಪುರುಷೋತ್ತಮ, ವಸಂತಿ ಶೆಟ್ಟಿ, ರೇವತಿ ಸಮ್ಮಾನಪತ್ರ ವಾಚಿಸಿದರು. ಮಹಿಳಾ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ ವಂದಿಸಿದರು. ಟ್ರಸ್ಟಿ ಮಂಜು ವಿಟ್ಲ ನಿರೂಪಿಸಿದರು.