ಸವಣೂರು : ಕೊಳ್ತಿಗೆ ಗ್ರಾಮದ ಮಣಿಕ್ಕಾರ ಪಾಲ್ತಾಡು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾಷ್ಟ ಬಂಧ ಬ್ರಹ್ಮಕಲಶೋತ್ಸವ, ಅಶ್ವತೊ§ೕಪನಯನ ವಿವಿಧ ವೈದಿಕ ಧಾರ್ಮಿಕ ಹಾಗೂ ಸಾಂಸ್ಕೃ ತಿಕ ಕಾರ್ಯಕ್ರಮಗಳೊಂದಿಗೆ ಕ್ಷೇತ್ರದ ತಂತ್ರಿ ಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಗಳ ನೇತೃತ್ವದಲ್ಲಿ ಡಿ. 23ರಿಂದ ಆರಂಭಗೊಂಡು ಡಿ. 28ರಂದು ಶ್ರೀ ದೇವರಿಗೆ ಬ್ರಹ್ಮಕಲಶಾ ಭಿಷೇಕದೊಂದಿಗೆ ಸಂಪನ್ನಗೊಂಡಿತು.
ಡಿ. 28ರಂದು ಪೂರ್ವಾಹ್ನ 5ರಿಂದ ಮಹಾಗಣಪತಿ ಹೋಮ, ತ್ರಿಕಾಲ ಪೂಜೆ, ಅಲ್ಪಪ್ರಸಾದ ಶುದ್ಧಿ, ಪ್ರಸಾದ ಪ್ರತಿಷ್ಠೆ, ನಾಂದೀಪುಣ್ಯಾಹ, ನಪುಂಸಕ ಶಿಲಾ ಪ್ರತಿಷ್ಠೆ, ರತ್ನನ್ಯಾಸಾದಿ ಪೀಠಪ್ರತಿಷ್ಠೆ, ಶಯ್ನಾಮಂಟಪದಿಂದ ಜೀವಕಲಶ, ಬಿಂಬ ನಿದ್ರಾಕಲಶಾದಿಗಳನ್ನು ಗರ್ಭಗೃಹದ ಒಳಗೆ ಒಯ್ಯುವ ಕಾರ್ಯಕ್ರಮ ನಡೆಯಿತು.
ಪೂರ್ವಾಹ್ನ ಗಂಟೆ 10.18ರಿಂದ 11.04ರ ತನಕ ವೃಷಭ ಲಗ್ನ ಶುಭಮುಹೂರ್ತದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೇವರ ಪ್ರತಿಷ್ಠೆ, ಅಷ್ಟಬಂಧಕ್ರಿಯೆ, ಅಶ್ವತೊ§ೕಪನಯನ ವಿವಾಹ ಸಂಸ್ಕಾರ, ಕುಂಭೇಶಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಜೀವಕಲಶಾಭಿಷೇಕ, ಪ್ರತಿಷ್ಠಾಪೂಜೆ, ಶಿಖರಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ಅಪರಾಹ್ನ 12 ಗಂಟೆಗೆ ತ್ರಿಕಾಲಪೂಜೆ ಪ್ರತಿಷ್ಠಾ ಬಲಿ, ದೇವಾಲಯದ ಮುಂದಿನ ನಿತ್ಯ ನೈಮಿತ್ತಗಳನ್ನು ನಿಶ್ಚಯಿಸಿ, ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ರಾತ್ರಿ 7ಕ್ಕೆ ತ್ರಿಕಾಲ ಪೂಜೆ, ಶ್ರೀ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಯಕ್ಷಗಾನ ಬಯಲಾಟ ‘ಕೃಷ್ಣಲೀಲೆ -ಕಂಸವಧೆ’ ಪ್ರದರ್ಶನಗೊಂಡಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ನಾರಾಯಣ ರೈ ಪಾಲ್ತಾಡು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್, ಕಾರ್ಯಾಧ್ಯಕ್ಷ ಪಾಲ್ತಾಡು ವಿನೋದ್ ರೈ, ಉಪಾಧ್ಯಕ್ಷರಾದ ಲಾವಣ್ಯಾ ವಿ. ರೈ ಬೆಂಗಳೂರು, ಸುಜಯ ವಿ. ರೈ ಪಾಲ್ತಾಡು, ರಾಜೇಶ್ ಶ್ಯಾನುಭಾಗ್ ಮಣಿಕ್ಕಾರ, ಕೇಶವ ಕುಂಜತ್ತಾಯ ಮಣಿಕ್ಕಾರ, ಕೃಷ್ಣ ಪ್ರಸಾದ್ ರೈ ಪಾಲ್ತಾಡು, ಸಂತೋಷ್ ಕುಮಾರ್ ರೈ ನಳೀಲು, ಗೀತಾ ಎಂ. ಶೆಟ್ಟಿ ಮಂಗಳೂರು, ಸವಿತಾ ಪ್ರಸಾದ್ ಶೆಟ್ಟಿ ಬೆಂಗಳೂರು, ಅನಿಲ್ ಕುಮಾರ್ ಶ್ಯಾನುಭಾಗ್ ಯು.ಎಸ್.ಎ., ಜ್ಯೋತಿ ಪ್ರಸಾದ್ ನಾಯಕ್ ಮಂಗಳೂರು, ಲಕ್ಷ್ಮಣ ಕಾಮತ್ ಶೆವಗೂರ್ ಮಂಗಳೂರು, ಗೋಪಾಲಕೃಷ್ಣ ಕುಂಜತ್ತಾಯ ಮಣಿಕ್ಕಾರ, ಕಾರ್ಯದರ್ಶಿ ಎಂ. ಗೌರೀಶ್ಚಂದ್ರ ಶ್ಯಾನುಭಾಗ್, ಉಪ ಕಾರ್ಯದರ್ಶಿಗಳಾದ ಸುನೀಲ್ ರೈ ಪಾಲ್ತಾಡು, ರಘುರಾಮ ಕುಂಜತ್ತಾಯ ಯು.ಎಸ್.ಎ., ವಸಂತ ಕುಮಾರ್ ರೈ ಪಾಲ್ತಾಡು, ಸುಂದರ ಪೂಜಾರಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಅರ್ಚಕ ಶ್ರೀನಿವಾಸ ಕುಂಜತ್ತಾಯ, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ವಿಲಾಸ್ ರೈ ಪಾಲ್ತಾಡು, ಎಂ. ಲಕ್ಷ್ಮೀನಾರಾಯಣ ಶ್ಯಾನುಭಾಗ್, ಹರಿಕೃಷ್ಣ ಎಸ್.ಎನ್., ಮೀನಾ ಆಳ್ವ, ವಿನಯ ಎಸ್. ರೈ, ರವಿಪ್ರಸಾದ್ ಆಳ್ವ, ಸೀತಾರಾಮ ನಾಯ್ಕ, ನವೀನ್ ರೈ ನಡುಮನೆ, ಅರುಣ ಕುಮಾರ್ ರೈ ನಳೀಲು, ಸತೀಶ್ ರೈ ನಳೀಲು, ಶೇಷಪ್ಪ ರೈ ಎಂ., ಮಹಾಲಿಂಗ ರೈ ಎಂ., ಸುದಾಮ ಮಣಿಯಾಣಿ, ದಾಮೋದರ ಮಣಿಯಾಣಿ, ದೇವಪ್ಪ ಗೌಡ ಎಂ., ಸದಾಶಿವ ರೈ ಬಾಕಿಜಾಲು, ರಾಮಣ್ಣ ರೈ ಬಾಕಿಜಾಲು, ಮಹೇಶ್ ನಾಯ್ಕ, ಗೋಪಾಲ ಮಣಿಯಾಣಿ, ಬಾಲಕೃಷ್ಣ ಗೌಡ ಪೂಜಾರಿಮನೆ, ಲೋಹಿತ್ ಬಂಗೇರ ಹಾಗೂ ವಿವಿಧ ಉಪ ಸಮಿತಿಗಳ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.