ಮಾಣಿ : ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯ ಪೂರ್ವಭಾವಿಯಾಗಿ ಗೊನೆ ಮುಹೂರ್ತ ಮತ್ತು ಕೋಳಿಗುಂಟ ನಡೆಯಿತು.
ಸಂಪ್ರದಾಯದ ಪ್ರಕಾರ ಎಂಟು ದಿನಗಳ ಮುಂಚಿತವಾಗಿ ಗುತ್ತು ಮನೆಯವರು, ಆರ್ಚಕರು, ಗ್ರಾಮಸ್ಥರ ಸಮಕ್ಷಮದಲ್ಲಿ ಗೊನೆಕಡಿದು ಕೋಳಿಗುಂಟ ನಡೆಯಿತು. ಫೆ. 5ರಂದು ರಾತ್ರಿ ಭಂಡಾರ ಏರಿ ಫೆ. 6ರಂದು ಬೆಳಗ್ಗೆ 9ರಿಂದ ಮಾಣಿ ಶ್ರೀ ಉಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ ನಡೆಯಲಿದೆ.