ಮಾಣಿ : ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ಹತ್ತು ಬಾಲಕಿಯರಿಗೆ ಕನ್ಯಾ ಸಂಸ್ಕಾರ ನೀಡಿ ಅನುಗ್ರಹಿಸಿದರು.
ಉಷಾಕುಮಾರಿ ಟಿ. ನೀರ್ಚಾಲು, ದೀಪಾ ಸಿ.ಎಚ್. ನೀರ್ಚಾಲು, ದೀಪ್ತಿ ಸಿ.ಎಚ್. ನೀರ್ಚಾಲು, ಕವನ ಕೆ. ಮುಳ್ಳೇರಿಯ, ಕೃಷ್ಣವೇಣಿ ಪೆರಡಾಲ, ಅಚಿಂತ್ಯ ಭಟ್ ಪೆರಡಾಲ, ಅನ್ನಪೂರ್ಣಾ ಕುಂಬ್ಳೆ, ಮೇಧಾ ಬಾಯಾರು, ಪೌಷಾ ಭಟ್ ಪಾತಾಳ, ಪಲ್ಲವೀ ಪೋಳ್ಯ ಅವರಿಗೆ ಕನ್ಯಾ ಸಂಸ್ಕಾರ ಅನುಗ್ರಹಿಸಲಾಯಿತು.
ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪು, ಮಂಗಳೂರು ವೈದಿಕ ಪ್ರದಾನ ಶಿವಪ್ರಸಾದ್ ಅಮೈ, ಮಾಣಿ ಮಠ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು.