Home ಧಾರ್ಮಿಕ ಸುದ್ದಿ ಶ್ರದ್ಧಾಭಕ್ತಿಯ ಶ್ರೀ ವರಮಹಾಲಕ್ಷ್ಮೀ ಹಬ್ಬ ಆಚರಣೆ

ಶ್ರದ್ಧಾಭಕ್ತಿಯ ಶ್ರೀ ವರಮಹಾಲಕ್ಷ್ಮೀ ಹಬ್ಬ ಆಚರಣೆ

ವಿವಿಧೆಡೆ ವಿಶೇಷ ಪೂಜೆ, ವ್ರತಾಚರಣೆ

1001
0
SHARE

ಮಹಾನಗರ: ನಗರಾದ್ಯಂತ ಶ್ರೀ ವರಮಹಾಲಕ್ಷ್ಮೀ ಹಬ್ಬವನ್ನು ಶ್ರದ್ಧಾ ಭಕ್ತಿ ಯಿಂದ ಶುಕ್ರವಾರ ಆಚರಿಸಲಾಯಿತು. ದೇವಸ್ಥಾನ, ಸಂಘ-ಸಂಸ್ಥೆ, ಮನೆಮನೆಗಳಲ್ಲಿ ವರಮಹಾಲಕ್ಷ್ಮೀ ಪೂಜೆಯನ್ನು ಸಂಭ್ರಮ ದಿಂದ ನೆರವೇರಿಸಲಾಯಿತು.

ವಿಶೇಷವಾಗಿ ಹೆಂಗಳೆಯರು ನೆರವೇ ರಿಸುವ ಹಬ್ಬ ವರಮಹಾಲಕ್ಷ್ಮೀ. ಇಷ್ಟಾರ್ಥ ಸಿದ್ಧಿಗಾಗಿ ಲಕ್ಷ್ಮೀದೇವಿಯನ್ನು ಆರಾಧಿಸುವ ಹಬ್ಬವಿದು. ಹಾಗಾಗಿ ದೇವಿ ದೇವಸ್ಥಾನಗಳಲ್ಲಿ ಹೆಣ್ಣು ಮಕ್ಕಳು ವಿಶೇಷ ಪೂಜೆಗಳನ್ನು ನೆರವೇರಿ ಸಿದರು. ಮಹತೋಭಾರ ಶ್ರೀ ಮಂಗಳಾ ದೇವಿ ದೇವಸ್ಥಾನ, ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ, ಬೋಳೂರು ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಜರಗಿತು.

ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ದೇಗುಲ, ಶರವು ಶ್ರೀ ಮಹಾಗಣಪತಿ ದೇಗುಲ, ಮಣ್ಣಗುಡ್ಡೆ ಹರಿದಾಸಲೇನಿನಲ್ಲಿರುವ ಶ್ರೀ ನವದುರ್ಗಾ ಮಹಾ ಗಣಪತಿ ದೇವಸ್ಥಾನ, ಇತಿಹಾಸ ಪ್ರಸಿದ್ಧ ಮರೋಳಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನ ಸಹಿತ ವಿವಿಧೆಡೆ‌ಗಳಲ್ಲಿ ವರ ಮಹಾಲಕ್ಷ್ಮೀ ಪೂಜೆಯನ್ನು ಆಚರಿಸಲಾಯಿತು. ಸಂಘ-ಸಂಸ್ಥೆ, ಮನೆಮನೆಗಳಲ್ಲಿಯೂ ವರಮಹಾಲಕ್ಷ್ಮೀ ಪೂಜೆ ನಡೆಯಿತು.

ರಾಜ್ಯ ದೇವಾಡಿಗರ ಸಂಘದ ಮಹಿಳಾ ಮತ್ತು ಯುವ ಸಂಘಟನೆ, ಕಡಂಬೋಡಿ ಆಶ್ರಯ ನಗರದ ಆಶ್ರಯ ಮಹಿಳಾ ಮತ್ತು ಯುವ ವೇದಿಕೆ, ಗುರುಪುರ ಶ್ರೀ ವರಲಕ್ಷ್ಮೀ ಮಹಿಳಾ ಮಂಡಳಿ ಆಶ್ರಯದಲ್ಲಿ ಪೂಜೆ ನೆರವೇರಿತು.

ದುಬಾರಿ ದರದಲ್ಲಿ ಮಾರಾಟ
ವರ ಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಖರೀದಿ ಪ್ರಕ್ರಿಯೆ ಬಿರುಸಾಗಿದ್ದಂತೆ ವ್ಯಾಪಾರಿಗಳು ದುಬಾರಿ ಹಣಕ್ಕೆ ಹೂ, ಹಣ್ಣು ಹಂಪಲು, ತರಕಾರಿ ಮಾರಾಟ ಮಾಡಿದರು. ಶುಕ್ರವಾರ ಒಂದು ಮೊಳ ಮಲ್ಲಿಗೆಗೆ350-400 ರೂ.ಗಳವರೆಗೆ ಮಾರಾಟ ವಾಗಿತ್ತು. ತರಕಾರಿ ಬೆಲೆಯೂ ಹೆಚ್ಚಿತ್ತು. ದ್ರಾಕ್ಷಿ ಕೆಜಿಗೆ 120, ದಾಳಿಂಬೆಗೆ ಕೆಜಿಯೊಂದಕ್ಕೆ 200 ರೂ.ಗಳಷ್ಟಕ್ಕೆ ಮಾರಾಟವಾಯಿತು.

ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಹಾವಳಿ ಹಾಗೂ ಚಾರ್ಮಾಡಿ ಘಾಟ್ ಬಂದ್‌ ಹಿನ್ನೆಲೆಯಲ್ಲಿಯೂ ಆ ಭಾಗಗಳಿಂದ ನಗರಕ್ಕೆ ತರಲಾಗುವ ವಸ್ತುಗಳನ್ನು ತರಲಾಗದೆಯೂ ಬೆಲೆ ಏರಿಕೆ ಆಗಿದೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here