Home ಧಾರ್ಮಿಕ ಸುದ್ದಿ ಅಂತೋನಿ ಚರ್ಚ್‌ ಫೆರ್ಮಾಯ್‌: ವಾರ್ಷಿಕ ಮಹೋತ್ಸವ

ಅಂತೋನಿ ಚರ್ಚ್‌ ಫೆರ್ಮಾಯ್‌: ವಾರ್ಷಿಕ ಮಹೋತ್ಸವ

1071
0
SHARE

ಮಹಾನಗರ: ಸಂತ ಅಂತೋನಿ ಚರ್ಚ್‌ ಫೆರ್ಮಾಯ್‌ ಇದರ ವಾರ್ಷಿಕ ಮಹೋತ್ಸವ ಜೂ. 13ರಂದು ಜರಗಿತು.

ಮಂಗಳೂರು ಕೆಥೋಲಿಕ್‌ ಧರ್ಮ ಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ರೆ| ವಂ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಪ್ರಧಾನ ಯಾಜಕರಾಗಿ ಬಲಿಪೂಜೆಯನ್ನು ನೆರವೇರಿಸಿ. ಕ್ರ್ತೈಸ್ತ ಜೀವನಕ್ಕೆ ಪವಾಡ ಪುರುಷ ಸಂತ ಅಂತೋನಿಯವರ ಪ್ರೇರಣೆ ಬಗ್ಗೆ ವಿವರಿಸಿದರು.

ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವಕ್ಕೆ ಪೂರ್ವಸಿದ್ಧತೆಯಾಗಿ ಜೂ. 4ರಿಂದ 9 ದಿನಗಳ ನೊವೇನ ಪ್ರಾರ್ಥನೆ, ಬಲಿಪೂಜೆ ಹಾಗೂ ವಿವಿಧ ಮೌಲ್ಯಾಧಾರಿತ ವಿಷಯಗಳ ಮೇಲೆ ಪ್ರವಚನ ನಡೆಸಲಾಯಿತು.

ಪಾಲನ ಸಮಿತಿಯ ಉಪಾಧ್ಯಕ್ಷ ಜೋನ್‌ ಪ್ರಕಾಶ್‌ ಪಿಂಟೋ ಮೇಲ್ವಿಚಾರಣೆ ನಡೆಸಿದರು. ಕಾರ್ಯದರ್ಶಿ ಕ್ಲಾರಾ ಪಿಂಟೋ ಸಹಕರಿಸಿದರು. ಚರ್ಚ್‌ನ ಧರ್ಮಗುರು ವಂ| ಲೂಯಿಸ್‌ ಕುಟಿನ್ಹಾ ಮಾರ್ಗದರ್ಶನ ನೀಡಿದರು. ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.

LEAVE A REPLY

Please enter your comment!
Please enter your name here