Home ಧಾರ್ಮಿಕ ಸುದ್ದಿ ಮಾರಿಯಮ್ಮ ಮಹಿಷಮರ್ದಿನಿ ದೇಗುಲ: ಎ. 17: ಜೀರ್ಣೋದಾರ, ಬ್ರಹ್ಮಕಲಶೋತ್ಸವ

ಮಾರಿಯಮ್ಮ ಮಹಿಷಮರ್ದಿನಿ ದೇಗುಲ: ಎ. 17: ಜೀರ್ಣೋದಾರ, ಬ್ರಹ್ಮಕಲಶೋತ್ಸವ

732
0
SHARE

ಮಹಾನಗರ : ನಗರದ ಹಳೆಕೋಟೆ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅಷ್ಟ ಮಂಗಲ ಪ್ರಶ್ನೆಯಂತೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ನಡೆಸಲು ಭಕ್ತರ ಸಭೆಯಲ್ಲಿ ನಿರ್ಧರಿಸಲಾಯಿತು.

ಕ್ಷೇತ್ರದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿರುವ ಎಲ್ಲ ವಿಚಾರಗಳನ್ನು ದೇಗುಲದ ವ್ಯವಸ್ಥಾಪನ ಸಮಿತಿ ಶ್ರದ್ಧಾ ಭಕ್ತಿಯಿಂದ ಅನುಷ್ಠಾನ ಮಾಡುತ್ತಿದ್ದು, ಎಪ್ರಿಲ್‌ 17ರಂದು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಕಾರ್ಯಕ್ರಮಗಳು ಮಾರಿಯಮ್ಮ ದೇವರ ಇಚ್ಛೆಯಂತೆ ನಡೆಯಲಿವೆ ಎಂದು ಕ್ಷೇತ್ರದಲ್ಲಿ ನಡೆದ ಭಕ್ತರ ಸಭೆಯಲ್ಲಿ ದೈವಜ್ಞ ಶ್ರೀರಂಗ ಐತಾಳ್‌ ಅವರು ಹೇಳಿದರು. ನೂತನವಾಗಿ ಪ್ರತಿಷ್ಠಾಪನೆ ಆಗಲಿರುವ ಮರದ ಮಾರಿಯಮ್ಮನ ಬಿಂಬದ ವಿಶೇಷತೆಯ ಬಗ್ಗೆ ಮಾಹಿತಿ ನೀಡಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಜೀರ್ಣೋದ್ಧಾರ
ಮತ್ತು ಬ್ರಹ್ಮಕಲಶೋತ್ಸವದ ಪೂರ್ವಭಾವಿ ಕಾರ್ಯಕ್ರಮಗಳ ಮಾಹಿತಿ ನೀಡಿ ಮಾತಂಗಿ ಕಟ್ಟೆಯು ಚೇತನ ಪೂಜಾರಿ ಮತ್ತು ಬಳಗದವರಿಂದ ಸೇವಾ ರೂಪದಲ್ಲಿ ಪುನರ್‌ ನಿರ್ಮಾಣಗೊಳ್ಳಲಿದೆ. ರಾಶಿ ಕಟ್ಟೆಯ ಕಾಮಗಾರಿ ಸೇವೆಯನ್ನು ರಮೇಶ್‌ ಶೆಟ್ಟಿ ಕಲ್ಕಾರ್‌ ಹಾಗೂ ಪ್ರವೀಣ್‌ ಶೇಟ್‌ ಅವರು ನಿರ್ವಹಿಸಲಿದ್ದು ಗರ್ಭಗುಡಿಯ ಮುಂಭಾಗದ ದಳಿಗೆ ಹಿತ್ತಾಳೆ ಮುಚ್ಚುವ ಸೇವೆಯನ್ನು ಸಂತೋಷ್‌ ಶೆಟ್ಟಿ ಅವರು ನಡೆಸಿಕೊಡಲಿದ್ದಾರೆ ಎಂದರು.

ಸಭೆಯಲ್ಲಿ ಧಾರ್ಮಿಕ ಪರಿಷತ್‌ನ ಸದಸ್ಯರಾದ ಎಸ್‌. ಸಂಜೀವ, ಮಾಜಿ ಆಡಳಿತ ಮೊಕ್ತೇಸರ ಯತೀಶ್‌ ಅಡ್ಯಂತಾಯ ಬಿ., ಪ್ರವೀಣ್‌ ಶೇಠ್, ಪ್ರಧಾನ ಅರ್ಚಕ ನಾರಾಯಣ ಭಟ್‌ ಮೊದಲಾದವರು ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಸ್ವಾಗತಿಸಿದರು. ದಿನೇಶ್‌ ಪಿ.ಎಸ್‌. ವಂದಿಸಿದರು. ವೇಣುಗೋಪಾಲ್‌ ಪುತ್ರನ್‌ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here