ಮಂಗಳೂರು: ದಕ್ಷಿಣ ಭಾರತದಪುರಾಣ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ದಲ್ಲಿ ಆ. 5ರಂದು ನಾಗರ ಪಂಚಮಿ ಆಚರಣೆ ನಡೆಯಲಿದೆ.
ಬೆಳಗ್ಗೆ 5.30ಕ್ಕೆ ನಾಗಬನದಲ್ಲಿ ಇರುವ ಅಸಂಖ್ಯ ನಾಗಬಿಂಬಗಳಿಗೆ ವಿಶೇಷ ಸೀಯಾಳ ಅಭಿಷೇಕ, ಕ್ಷೀರಾಭಿಷೇಕ ಹಾಗೂ ನಾಗತಂಬಿಲ ಸೇವೆಗಳು ಜರಗಲಿವೆ. ಮಧ್ಯಾಹ್ನ 12ಕ್ಕೆ ಗರ್ಭ ಗುಡಿಯಲ್ಲಿರುವ ಪ್ರಧಾನ ಶ್ರೀ ಅನಂತ ಪದ್ಮ ನಾಭ ದೇವರಿಗೆ ನಾಗರಪಂಚಮಿಯ ವಿಶೇಷ ಮಹಾಪೂಜೆ, ಅನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.