Home ಧಾರ್ಮಿಕ ಕಾರ್ಯಕ್ರಮ ಗುರುಪೂರ್ಣಿಮಾ, ಮೃತ್ಯುಂಜಯ ಹೋಮ

ಗುರುಪೂರ್ಣಿಮಾ, ಮೃತ್ಯುಂಜಯ ಹೋಮ

ಮಾತಾ ಅಮೃತಾನಂದಮಯಿ ಮಠ

1499
0
SHARE

ಮಹಾನಗರ: ನಗರದ ಮಾತಾ ಅಮೃತಾನಂದಮಯಿ ಮಠದಲ್ಲಿ ಗುರುಪೂರ್ಣಿಮಾ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.

ಮಠಾಪತಿ ಬ್ರಹ್ಮಚಾರಿಣಿ ಮಂಗಳಾ ಮೃತ ಚೈತನ್ಯರ ಸಾರಥ್ಯದಲ್ಲಿ ಶ್ರೀ ಗುರುಪಾದುಕಾ ಪೂಜೆ, ಗುರು ಹೋಮ, ಮಹಾ ಮೃತ್ಯುಂಜಯ ಹೋಮ, ಸರ್ವೈಶ್ವರ್ಯ ಪೂಜೆ, ಆರತಿ, ಭಕ್ತರಿಂದ ಕ್ಷೀರಾಭಿಷೇಕ ಮೊದಲಾದ ಕಾರ್ಯಕ್ರಮ ಜರಗಿತು.

ಈ ಸಂದರ್ಭ ಅವರು ಮಾತನಾಡಿ, ಜೀವನದಲ್ಲಿ ಸದ್ಗುರುವಿನ ಪಾತ್ರ ಅತ್ಯಂತ ಪ್ರಾಮುಖ್ಯತೆ ಹೊಂದಿದೆ ಎಂಬುದು ಗುರುವಿನ ಅನುಗ್ರಹದೊಂದಿಗೆ ಸಾರ್ಥಕ ಜೀವನ ನಡೆಸುತ್ತಿರುವ ಭಕ್ತರ ಅನುಭವಗಳಾಗಿವೆ. ಅಮ್ಮನವರು ಮಕ್ಕಳ ಶ್ರೇಯೋಭಿವೃದ್ಧಿಗೆ ಪ್ರಾಣಶಕ್ತಿಯೊಂದಿಗೆ ಮಂತ್ರದೀಕ್ಷೆ ನೀಡುತ್ತಿದ್ದಾರೆ. ಬ್ರಹ್ಮಸ್ಥಾನಗಳಲ್ಲಿ ಪ್ರಾಣ ಪ್ರತಿಷ್ಠೆ ಮಾಡಿದ್ದಾರೆ. ಅಮ್ಮನವರ ಮಕ್ಕಳ ಸಮಾಜಮುಖೀ ಸೇವೆ ಇಂದು ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಬ್ರಹ್ಮಚಾರಿ ರತೀಶ್‌ ಹೋಮ ಹಾಗೂ ಪೂಜಾ ವಿವಿಧಾನಗಳನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here