ಮಹಾನಗರ : ನಗರದ ಆಂಜೆಲೊರ್ ಚರ್ಚಿನ ವಾರ್ಷಿಕ ಮಹೋತ್ಸವ ಅ. 2ರಂದು ನಡೆಯಿತು. ಕಿನ್ನಿಗೋಳಿ ಚರ್ಚ್ನ ಧರ್ಮಗುರು ವಂ| ಮ್ಯಾಥ್ಯೂವಾಸ್ ಪ್ರಧಾನ ಗುರುಗಳಾಗಿ ಸುಮಾರು 20 ಮಂದಿ ಗುರುಗಳ ಜತೆಗೂಡಿ ಸಂಭ್ರಮದ ಬಲಿಪೂಜೆಯನ್ನು ನೆರವೇರಿಸಿದರು.
ವಂ| ರಾಹುಲ್ ಪ್ರವಚನ ನೀಡಿದರು. ನಾವೆಲ್ಲರೂ ದೇವರ ಮಕ್ಕಳು, ಯೇಸುಕ್ರಿಸ್ತರು ತೋರಿಸಿದ ಸನ್ಮಾರ್ಗದಲ್ಲಿ ನಡೆದು ಪರಸ್ಪರ ಅನ್ಯೋನತೆ ಹಾಗೂ ಸಹಬಾಳ್ವೆಯಿಂದ ದೇವರಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಜೀವನ ನಡೆಸಬೇಕು ಎಂದರು.
ನಗರದ ನೂರಾರು ಮಂದಿ ಭಕ್ತರು ಬಲಿಪೂಜೆಯಲ್ಲಿ ಭಾಗಿಗಳಾಗಿದ್ದರು. ಆಂಜೆಲೋರ್ ಚರ್ಚಿನ ಧರ್ಮಗುರು ವಂ| ವಿಲಿಯಂ ಮಿನೇಜಸ್ ಅವರು ಸಂಭ್ರಮಕ್ಕೆ ಸಹಕರಿಸಿದವರಿಗೆ ಮೊಂಬತ್ತಿ ನೀಡಿ ಗೌರವಿಸಿ ಭಾಗವಹಿಸಿದ ಎಲ್ಲರನ್ನು ವಂದಿಸಿದರು.
ಪ್ರಸಾದದ ಮೆರವಣಿಗೆ ಸಂಜೆ ಆಂಜೆಲೋರ್ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ವಾರ್ಷಿಕೋತ್ಸವದ ಸಲುವಾಗಿ ಸೆ. 29ರಂದು ಪರಮಪ್ರಸಾದದ ಮೆರವಣಿಗೆ ಚರ್ಚಿನಿಂದ ಕಪಿತಾನಿಯೊ ಶಾಲೆಯ ತನಕ ನಡೆದಿತ್ತು. ಅಂದಿನ ಪ್ರಧಾನ ಗುರುಗಳಾಗಿ ಜೆಪ್ಪು ಸೆಮಿನರಿಯ ಮಖ್ಯಸ್ಥ ವಂ|
ರೊನಾಲ್ಡ್ ಸೆರಾವೊ ಆಶೀರ್ವದಿಸಿದರು. ಭಕ್ತರು ಮೊಂಬತ್ತಿಗಳನ್ನು ಬೆಳಗಿ ಪ್ರಾರ್ಥಿಸಿ, ಸಿಹಿ ತಿಂಡಿಗಳೊಂದಿಗೆ ಪರಸ್ಪರ ಶುಭಾಶಯಗಳನ್ನು ಕೋರಿದರು.