ಮಂಗಳೂರು : ಶ್ರೀ ಕಾಶೀ ಮಠ ಸಂಸ್ಥಾನದ ಗುರುಗಳಾದ ಶ್ರೀಮತ್ ಸುಕೃತೀಂದ್ರತೀರ್ಥ ಸ್ವಾಮೀಜಿ ಮತ್ತು ಸದ್ಗುರು ಶ್ರೀಮತ್ ಸುಧೀಂದ್ರತೀರ್ಥ ಸ್ವಾಮೀಜಿಯವರ ಪಾದುಕೆಗಳನ್ನು ಕೊಂಚಾಡಿ ಶ್ರೀ ಕಾಶಿ ಮಠದ ಶ್ರೀ ಮಹಾ ಲಸಾ ನಾರಾಯಣಿ ದೇವಸ್ಥಾನದ ಪ್ರಾಕಾರದಲ್ಲಿ ಶುಕ್ರವಾರ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಪ್ರತಿಷ್ಠಾಪಿಸಿದರು.
ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಕಸ್ತೂರಿ ಸದಾಶಿವ ಪೈ, ಎಂ. ಸುರೇಶ್ ಕಾಮತ್, ಎಚ್. ಗೋಕುಲದಾಸ್ ನಾಯಕ್, ಉರ್ವಿ ರಾಧಾಕೃಷ್ಣ ಶೆಣೈ, ಮಾರೂರು ಶಶಿಧರ್ ಪೈ, ಕೆ. ಅಚ್ಯುತ ಪೈ, ವಿಜಯ ಪೈ, ಎಚ್. ಯೋಗೀಶ್ ಭಟ್, ಬಿಜೆಪಿ ಕರ್ನಾಟಕ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ಡಾ| ಭರತ್ ಶೆಟ್ಟಿ ಮತ್ತು ಭಜಕರು ಉಪಸ್ಥಿತರಿದ್ದರು.