ಮಹಾನಗರ: ಸಂತ ಅಂತೋನಿ ಅವರ ವಾರ್ಷಿಕ ಮಹೋತ್ಸವಕ್ಕೆ ತಯಾರಿಯಾಗಿ ನಡೆ ಯುತ್ತಿರುವ ಹನ್ನೊಂದನೇ ದಿನದ ನೊವೇನ ಪ್ರಾರ್ಥನೆಯಂದು ಕಿನ್ನಿ ಗೋಳಿ ಧರ್ಮಕೇಂದ್ರದ ಸಹಾಯಕ ಗುರುಗಳಾದ ವಂ| ರೂಪೇಶ್ ತಾವ್ರೊ ಅವರು ಬಲಿ ಪೂಜೆ ಅರ್ಪಿಸಿದರು. ಭಕ್ತಿ ಕಾರ್ಯಕ್ರಮದಲ್ಲಿ ಸಮಾಜ ಸೇವಕರು ಗಳಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಕುಷ್ಠರೋಗಿಗಳ ಮಧ್ಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ, ಕೊನೆಗೆ ತಾವು ಸಹ ಕುಷ್ಠರೋಗಕ್ಕೆ ಗುರಿಯಾದ ಮೊಳೊ ಕ್ಕಾಯಿಯಾ ಸಂತ ಡೆಮಿಯನ್ರವರ ಜೀವನದ ನಿದರ್ಶನ ನೀಡಿ ಪ್ರತಿಯೊಬ್ಬ ಕೆಥೊಲಿಕರೂ ಪರರ ಸೇವೆ ಮಾಡಬೇಕು. ಸಮಾಜ ಸೇವಕರಿಗಾಗಿ ಪ್ರಾರ್ಥಿಸಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಸಹಾಯಕ ನಿರ್ದೇಶಕ ವಂ| ತ್ರಿಶಾನ್ ಡಿ’ಸೋಜಾ ಅವರು ಜಪಸರ ಪ್ರಾರ್ಥನೆ ಹಾಗೂ ನೊವೇನ ಪ್ರಾರ್ಥನೆ ನಡೆಸಿಕೊಟ್ಟರು. ಆಶ್ರಮದ ಸಹಾಯಕ ನಿರ್ದೇಶಕ ವಂ| ರೊಶನ್ ಡಿ’ಸೋಜಾ ಬಲಿಪೂಜೆಯಲ್ಲಿ ಭಾಗವಹಿಸಿದರು. ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.