ಮಹಾನಗರ: ಹಿಂದೂ ಯುವ ಸೇನೆ, ಕೇಂದ್ರೀಯ ಮಂಡಳಿ ಆಶ್ರಯದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ಸೆ. 2ರಿಂದ 8ರ ವರೆಗೆ ನಡೆಯಲಿರುವ 27ನೇ ವರ್ಷದ ಮಂಗಳೂರು ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಬಲ್ಮಠದ ಸೇನಾ ಕಾರ್ಯಾಲಯದಲ್ಲಿ ನಡೆಯಿತು.
ಹಿಂದೂ ಯುವ ಸೇನಾ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಅಧ್ಯಕ್ಷ ಯಶೋಧರ ಚೌಟ, ಗಣೇಶೋತ್ಸವ ಸಮಿತಿ ಅದ್ಯಕ್ಷ ಶಶಿಕಾಂತ್ ನಾಗ್ವೇಕರ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಚೌಟ, ಕೋಶಾಧಿಕಾರಿ ಸುರೇಶ್ ಶೆಟ್ಟಿ ಕೊಟ್ಟಾರ ಕ್ರಾಸ್, ಉಪಾಧ್ಯಕ್ಷರಾದ ಉಮೇಶ್ ಪೈ, ಧರ್ಮೇಂದ್ರ ಎಂ.ಪಿ., ವಸಂತ್ ಉರ್ವಸ್ಟೋರ್, ಕೊರಗಪ್ಪ ಶೆಟ್ಟಿ ಆಕಾಶಭವನ, ಲಕ್ಷ್ಮಣ್ ಜೋಗಿ ಮೂಡುಶೆಡ್ಡೆ, ಯಾದವ ಕುಂದರ್ ವಾಮಂಜೂರು, ಸುರೇಶ್ ಕೆಮ್ಮಟೆ, ಕಾರ್ಯದರ್ಶಿಗಳಾದ ಸಂದೀಪ್ ನಂದನಪುರ, ಹೇಮಪ್ರಕಾಶ್ ಹೆಗ್ಡೆ, ಹರಿಣಿ ವಿಜಯೇಂದ್ರ, ಹರೀಶ್ ಬಜಾಲ್, ರವಿಚಂದ್ರ ಎಕ್ಕೂರು, ಲೋಕೇಶ್ ಉಳ್ಳಾಲ್, ಪವನ್ ಮಂಕಿಸ್ಟಾಂಡ್, ಚಿದಾನಂದ ಕಲ್ಲಡ್ಕ, ಸುಕುಮಾರ್ ಸುರತ್ಕಲ್, ಲೆಕ್ಕಪರಿಶೋಧಕ ಕೇಶವ ಸಾಲ್ಯಾನ್, ಜಿಲ್ಲಾಧ್ಯಕ್ಷ ವೀರಪ್ಪ ಮೂಡುಶೆಡ್ಡೆ, ಉಪಾಧ್ಯಕ್ಷ ನಾಗರಾಜ ಆಚಾರ್ಯ ಹಾಗೂ ವಿವಿಧ ಶಾಖಾ ಪದಾಧಿಕಾರಿಗಳು, ಮಾತೃಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಪ್ರವೀಣ್ ಎಸ್. ಕುಂಪಲ ನಿರೂಪಿಸಿ, ಕಿರಣ್ ರೈ ಬಜಾಲ್ ವಂದಿಸಿದರು.