Home ಧಾರ್ಮಿಕ ಸುದ್ದಿ ದ.ಕ. ಜಿಲ್ಲೆ : ಚರ್ಚ್‌ಗಳಲ್ಲಿ ರವಿವಾರದ ಪ್ರಾರ್ಥನೆ ಆರಂಭ

ದ.ಕ. ಜಿಲ್ಲೆ : ಚರ್ಚ್‌ಗಳಲ್ಲಿ ರವಿವಾರದ ಪ್ರಾರ್ಥನೆ ಆರಂಭ

130
0
SHARE
ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಬಲಿ ಪೂಜೆ ನಡೆಸಿದರು.

ಮಂಗಳೂರು: ಲಾಕ್‌ಡೌನ್‌ ಪ್ರಯುಕ್ತ ಚರ್ಚ್‌ಗಳಲ್ಲಿ ರದ್ದು ಪಡಿಸಿದ್ದ ಪ್ರಾರ್ಥನೆಗಳು 12 ವಾರಗಳ ಬಳಿಕ ಮಂಗಳೂರು ಧರ್ಮ ಪ್ರಾಂತ ದಲ್ಲಿ ಪುನರಾರಂಭಗೊಂಡಿದ್ದು, ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ರವಿವಾರ ಕೊಡಿಯಾಲ್‌ಬೈಲ್‌ನ ಬಿಷಪ್ಸ್‌ ಹೌಸ್‌ ಚಾಪೆಲ್‌ನಲ್ಲಿ ಬಲಿ ಪೂಜೆಯನ್ನು ನಡೆಸಿದರು.

ರವಿವಾರ ರೊಜಾರಿಯೋ ಕೆಥೆಡ್ರಲ್‌, ಅದ್ಯಪಾಡಿ, ಮೊಗರ್ನಾಡ್‌, ಮೂಡುಬಿದಿರೆ ಟೌನ್‌, ಪುತ್ತೂರು, ವಿಟ್ಲ, ನಿಡ್ಪಳ್ಳಿ, ಕಾಸ್ಸಿಯಾ, ನೀರುಮಾರ್ಗ ಚರ್ಚ್‌ಗಳಲ್ಲಿ ಬಲಿ ಪೂಜೆಗಳನ್ನು ನಡೆಸಲಾಗಿದೆ.

ಉಡುಪಿ: ಜೂ. 30ರ ತನಕ ಸಾಮೂಹಿಕ ಪ್ರಾರ್ಥನೆ ಇಲ್ಲ
ಉಡುಪಿ: ಭಕ್ತರ ಆರೋಗ್ಯ ಹಾಗೂ ಸುರಕ್ಷೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಉಡುಪಿ ಜಿಲ್ಲೆಯ ಯಾವುದೇ ಚರ್ಚ್‌ನಲ್ಲಿ ಜೂ. 30ರ ವರೆಗೆ ಸಾಮೂಹಿಕ ಪೂಜೆ, ಪ್ರಾರ್ಥನೆಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ.

LEAVE A REPLY

Please enter your comment!
Please enter your name here