ಮಂಗಳೂರು : ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸೆ. 29ರಿಂದ ಅ. 9ರ ವರೆಗೆ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ನವರಾತ್ರಿ ಮಹೋತ್ಸವ ನಡೆಯಲಿದೆ.
ಅಕ್ಟೋಬರ್ 2ರಂದು ಶ್ರೀ ಲಲಿತಾ ಪಂಚಮಿ, ಅ. 4ರಂದು ಮೂಲಾ ನಕ್ಷತ್ರ ರಾತ್ರಿ ಉತ್ಸವಾರಂಭ, ಅ. 7ರಂದು ಮಹಾನವಮಿ, ಚಂಡಿಕಾ ಹೋಮ, ರಾತ್ರಿ ದೊಡ್ಡ ರಂಗಪೂಜೆ, ಸಣ್ಣರಥೋತ್ಸವ ನಡೆಯಲಿದೆ. ಅ. 8ರಂದು ವಿಜಯದಶಮಿ ವಿದ್ಯಾರಂಭ, ತುಲಾಭಾರ ಮಧ್ಯಾಹ್ನ ರಥಾರೋಹಣ, ರಾತ್ರಿ 7.30ಕ್ಕೆ ರಥೋತ್ಸವ, ಅ. 9ರಂದು ಅವಭೃತ ಮಂಗಳ ಸ್ನಾನ, ಅ. 10ರಂದು ಸಂಪ್ರೋಕ್ಷಣೆ, ಸಂಜೆ 6.30ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ದೆಗುಲದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.