ಮಂಗಳೂರು : ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿಯ ಬ್ರಹ್ಮ ರಥೋತ್ಸವ ಡಿ. 2ರಂದು ಮಧ್ಯಾಹ್ನ 1 ಗಂಟೆಗೆ ಜರಗಲಿದೆ.
ಕೊಪ್ಪರಿಗೆ ಮುಹೂರ್ತದೊಂದಿಗೆ ಷಷ್ಠಿ ಮಹೋತ್ಸವ ಆರಂಭವಾಗಲಿದ್ದು, ಪ್ರತಿ ದಿನವೂ ಅನ್ನ ಸಂತರ್ಪಣೆ ನಡೆಯಲಿದೆ. ನ. 27ರಂದು ಬೆಳಗ್ಗೆ ಪ್ರಾರ್ಥನೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಮಯೂರ ವಾಹನೋತ್ಸವ, 28ರಂದು ಮಧ್ಯಾಹ್ನ ಮಹಾಪೂಜೆ ವೃಷಭ ವಾಹನೋತ್ಸವ, 29ರಂದು ಮಧ್ಯಾಹ್ನ ಮಹಾಪೂಜೆ, ರಾತ್ರಿ ವಿಶೇಷ ಸರ್ಪ ವಾಹನೋತ್ಸವ, 30ರಂದು ಬೆಳಗ್ಗೆ ಗಣಹೋಮ, ರಾತ್ರಿ ಸವಾರಿಬಲಿ, ಕಟ್ಟೆ ಪೂಜೆ, ಗಜ ವಾಹನೋತ್ಸವ, ಡಿ 1ರಂದು ಪಂಚಮಿ, ಬೆಳಗ್ಗೆ ಅಂಗ ಪ್ರದಕ್ಷಿಣೆ, ಮಹಾಪೂಜೆ, ಅಶ್ವವಾಹನದೊಂದಿಗೆ ರಾತ್ರಿ ಸವಾರಿ ಬಲಿ ಕಟ್ಟೆಪೂಜೆಗಳು, ತೆಪ್ಪೋತ್ಸವ, ಎರಡನೇ ಬಲಿ, ಚಂದ್ರಮಂಡಲೋತ್ಸವ, ಪಾಲಕಿ ಉತ್ಸವ ಜರಗಲಿದೆ. ಬೆಳಗ್ಗೆ 9.30ಕ್ಕೆ ಶ್ರೀ ದೇವಾಲಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಉತ್ತರ ಗೋಪುರ ಮತ್ತು ನೂತನ ಬ್ರಹ್ಮರಥದ ಸಮರ್ಪಣ ಕಾರ್ಯಕ್ರಮ ನಡೆಯಲಿದೆ.
ಡಿ. 2ರಂದು ಷಷ್ಠಿ, ಬೆಳಗ್ಗೆ ರಥ ಕಲಶ, ಬ್ರಹ್ಮರಥೋತ್ಸವ, ಅನ್ನ ಸಂತರ್ಪಣೆ ಜರಗಲಿದೆ. 3ರಂದು ಬೆಳಗ್ಗೆ 7ಕ್ಕೆ ಜೋಡು ದೇವರ ಬಲಿ ಉತ್ಸವ, ಚಂದ್ರಮಂಡಲ ಉತ್ಸವ, ಪಾಲಕಿ ಉತ್ಸವದೊಂದಿಗೆ ಪ್ರಸಾದ ವಿತರಣೆ ನಡೆಯಲಿದೆ.