ಮಂಗಳೂರು: ಶ್ರದ್ಧೆ ನಿರ್ಮಲ ನಿಷ್ಕಲ್ಮಶ ಮನಸ್ಸಿನ ಕಾಳಿಕಾಂಬೆಯನ್ನು ಆರಾಧಿಸಿದಲ್ಲಿ ಯಶಸ್ಸು ಖಂಡಿತ. ದೇವರಲ್ಲಿ ಭಕ್ತಿ ಅನುದಿನವೂ ಇರಬೇಕು ಎಂದು ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ತಿಳಿಸಿದರು.
ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ನೂತನ ಶಿಲಾಮಯ ಸುತ್ತುಪೌಳಿ ಶಿಲಾನ್ಯಾಸ ಸಂದರ್ಭದಲ್ಲಿ ಅವರು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಯಾಗಿದ್ದ ವಿದ್ವಾಂಸರಾದ ಪಂಜ ಭಾಸ್ಕರ ಭಟ್ ಮಾತನಾಡಿ, ವಿಶ್ವಕರ್ಮ ಜನಾಂಗದ ಕೊಡುಗೆ ಸಮಾಜಕ್ಕೆ ಮಹತ್ತರವಾದು. ಸಮಸ್ತರೂ ಏಕಮನಸ್ಸಿನಿಂದ ಕಾರ್ಯ ಪ್ರವರ್ತರಾದರೆ ಜೀರ್ಣೋದ್ಧಾರ ಕಾರ್ಯ ಶೀಘ್ರತಿಶ್ರೀಘ್ರ ನೆರವೇರುವುದು ಖಚಿತ ಎಂದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ, 2ನೇ ಮೊಕ್ತೇಸರ ಸುಂದರ್ ಆಚಾರ್ಯ ಬೆಳುವಾಯಿ, 3ನೇ ಮೊಕ್ತೇಸರ ಎ. ಲೋಕೇಶ್ ಆಚಾರ್ಯ, ಜೀರ್ಣೋದ್ಧಾರ ಸಮಿ ತಿಯ ಅಧ್ಯಕ್ಷ ಧನಂಜಯ ಪಾಲ್ಕೆ, ಜೀರ್ಣೋದ್ಧಾರ ಸಮಿತಿಯ ಕಾರ್ಯಾ ಧ್ಯಕ್ಷ ಕೈಂತಿಲ ಸದಾಶಿವ ಆಚಾರ್ಯ, ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಕಾಳಿಕಾಂಬಾ ಸೇವಾಸಮಿತಿ, ವಿಶ್ವಬ್ರಾಹ್ಮಣ ಮಹಿಳಾ ಸಮಿತಿ, ವಿಶ್ವಕರ್ಮ ಯುವವೇದಿಕೆ, ವಿಶ್ವಕರ್ಮ ಯುವಮಿಲನ, ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ವಿವಿಧ ಕಟ್ಟಡಗಳ ಸ್ವರ್ಣಶಿಲ್ಪಿಗಳು ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು.
ಸುತ್ತುಪೌಳಿಯ ಎಂಜಿನಿಯರ್ ದಿನೇಶ್ ಪಡುಬಿದ್ರಿ ಅವರನ್ನು ಅಭಿ ನಂದಿಸಲಾಯಿತು. ಕ್ಷೇತ್ರದ ಪ್ರಧಾನ ತಂತ್ರಿ ಬ್ರಹ್ಮಶ್ರೀ ಲಕ್ಷ್ಮೀಕಾಂತ್ ಶರ್ಮಾ, ಕ್ಷೇತ್ರದ ಪ್ರಧಾನ ಅರ್ಚಕರಾದ ಧನಂಜಯ ಪುರೋಹಿತ್, ವಿಘ್ನೕಶ್ ಪುರೋಹಿತ್ ಪುರೋಹಿತ್ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯದರ್ಶಿ ಸುಜೀರ್ ವಿನೋದ್ ನಿರೂಪಿಸಿದರು.