ಮಂಗಳೂರು: ಏಕಾಗ್ರತೆ ಮತ್ತು ನಂಬಿಕೆಯಿಟ್ಟು ದೇವರ ಸೇವೆ ಮಾಡಿದರೆ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ವಕೀಲ ರಘುನಾಥ್ ಅಭಿಪ್ರಾಯಪಟ್ಟರು.
ಬಜಾಲ್ ಜಲ್ಲಿಗುಡ್ಡೆಯ ಸೋನಾಲಿಕೆ ಶ್ರೀ ನಾಗಬ್ರಹ್ಮ ವನದುರ್ಗಾ ಮತ್ತು ಪರಿವಾರ ದೇವರ ಸನ್ನಿಧಿಯಲ್ಲಿ ಪುನಃ ಪ್ರತಿಷ್ಠಾಪನೆ ಮತ್ತು ಕಲಶಾಭಿಷೇಕದ ಹಿನ್ನೆಲೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಇದು ಇಷ್ಟಾರ್ಥಗಳನ್ನು ಈಡೇರಿಸುವ ಮಹಾನ್ ಆಲಯ ಎಂದರು.
ಅಳಪೆ ಕರ್ಮಾರ್ನ ಸತ್ಸಂಗ ಸಮಿತಿಯ ವಾಸುದೇವ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಪ್ರಮುಖರನ್ನು ಸಮ್ಮಾನಿಸಲಾಯಿತು. ಶ್ರೀ ನಾಗಬ್ರಹ್ಮ ವನದುರ್ಗಾ
ಹಾಗೂ ಪರಿವಾರ ದೇವರುಗಳ ಪುನಃ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಮಾ. 2ರಿಂದ ಆರಂಭವಾಗಿದ್ದು ಮಾ. 4ರಂದು ಸಂಪನ್ನಗೊಂಡಿತು. ಅಪಾರ
ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಮಂಗಳೂರು ನಗರ ಉತ್ತರದ ಹಿಂದುಳಿದ ವರ್ಗದ ಮೋರ್ಚಾ ಅಧ್ಯಕ್ಷ ಜನಾರ್ದನ ಅರ್ಕುಳ, ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ ಚೌಟ, ಜಪ್ಪು ಅಭಿಷಿಕ್ತ ಫೈನಾನ್ಸ್ನ ರಾಮಚಂದ್ರ ಆಳ್ವ, ಬಜಾಲು ಬೀಡು ದೇವದಾಸ ಮೇಲಾಂಟ, ಕುಡ್ಲ ಚೀಟ್ಸ್ ಪ್ರೈವೇಟ್ ಲಿ.ನ ಕಿರಣ್ ರೈ, ಲಯನ್ಸ್ ಕ್ಲಬ್ ಜಿಲ್ಲಾ ಸಂಪರ್ಕ ಅಧಿಕಾರಿ ಪ್ರಕಾಶ್ ಪೈ, ಪ್ರಮುಖರಾದ ಜ್ಯೋತಿಷ್ ನಾಯರ್, ಪ್ರದೀಪ್
ಕುಮಾರ್ ನಾಯರ್, ಯಶವಂತ ಶೆಟ್ಟಿ, ಬಿ.ಆರ್. ಶೆಟ್ಟಿ, ಗೋವಿಂದ ನಾಯ್ಕ, ಜಯಲಕ್ಷ್ಮೀ ಸೋನಾಲಿಕೆ, ಚಂದ್ರಶೇಖರ ಜಲ್ಲಿಗುಡ್ಡೆ, ಪ್ರಸಾದ್ ಶೆಟ್ಟಿ, ಪ್ರಭಾಕರ್ ಉಪಸ್ಥಿತರಿದ್ದರು. ಮಾನಸ ರೈ ಸ್ವಾಗತಿಸಿದರು.