Home ಧಾರ್ಮಿಕ ಸುದ್ದಿ ಸೌಹಾರ್ದ ಸಭೆ ಹಾಗೂ ಇಫ್ತಾರ್‌ ಕೂಟ

ಸೌಹಾರ್ದ ಸಭೆ ಹಾಗೂ ಇಫ್ತಾರ್‌ ಕೂಟ

'ಎಲ್ಲ ಜಾತಿ ಧರ್ಮದವರು ಸಹಬಾಳ್ವೆ ಯಿಂದ ಬಾಳಬೇಕು'

574
0
SHARE

ಮಹಾನಗರ: ಭಾರತ ಬಹು ಸಂಸ್ಕೃತಿಯ ದೇಶವಾಗಿದ್ದು, ಎಲ್ಲ ಜಾತಿ, ಧರ್ಮದವರು ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರು ನಗರದ ಫಾದರ್‌ ಮುಲ್ಲರ್‌ ಕನ್ವೆನ್ಶನ್‌ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ 3ನೇ ವರ್ಷದ ಸೌಹಾರ್ದ ಸಭೆ ಹಾಗೂ ಇಫ್ತಾರ್‌ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮನುಷ್ಯ ಮನುಷ್ಯನ ನಡುವೆ ದ್ವೇಷ ಹುಟ್ಟಿಸುವ ಅನೇಕ ಸನ್ನಿವೇಶಗಳು ನಡೆದಿವೆ. ಇದು ಕೊನೆಯಾಗಬೇಕು. ಭವಿಷ್ಯದಲ್ಲಿ ಸಮಾಜದ ಎಲ್ಲ ಜಾತಿ ಧರ್ಮದವರು ಸಹಬಾಳ್ವೆಯಿಂದ ಬಾಳುವಂತಾಗಬೇಕು ಎಂದು ತಿಳಿಸಿದರು.

ಸೌಹಾರ್ದಕ್ಕಾಗಿ ಹಬ್ಬ ಆಚರಣೆ:
ಐವನ್‌ ಡಿ’ಸೋಜಾ ಮಾತನಾಡಿ, ಹಬ್ಬಗಳನ್ನು ಆಚರಣೆ ಮಾಡುವುದು ಶಾಂತಿ, ಸೌಹಾರ್ದದ ಸಲುವಾಗಿಯೇ ವಿನಾ ಶೋಕಿಗಾಗಿ ಅಲ್ಲ. ಹಬ್ಬಗಳು ಸಮುದಾಯದ ಎಲ್ಲರನ್ನೂ ಹತ್ತಿರಕ್ಕೆ ತರುತ್ತದೆ. ಎಲ್ಲ ಧರ್ಮಕ್ಕೆ ಗೌರವ ನೀಡಬೇಕು ಎಂದರು. ಅಬ್ದುಲ್‌ ಅಜೀದ್‌ ದಾರಿಮಿ, ಮನಪಾ ಮೇಯರ್‌ ಭಾಸ್ಕರ್‌ ಕೆ., ಮಹಮ್ಮದ್‌ ಕುಂಜತ್ತಬೈಲ್‌, ಹೇಮನಾಥ ಶೆಟ್ಟಿ, ನವೀನ್‌ ಚಂದ್ರ ಶೆಟ್ಟಿ, ಶಿವಾಜಿ ಸುವರ್ಣ, ಅಬ್ದುಲ್‌ ರಹಿಮಾನ್‌, ರೋಜಿ ಮಥಾಯಸ್‌, ಹಿಲ್ಟಾ ಆಳ್ವ, ಮೈಕಲ್‌ ಡಿ’ಸೋಜಾ, ರಶೀದ್‌ ಹಾಜಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here