ಮಹಾನಗರ : ಧಾರ್ಮಿಕ ಆಚರಣೆ ಗಳು ನಮ್ಮಲ್ಲಿ ಪ್ರೀತಿ, ಸಹ ಬಾಳ್ವೆ, ಶಾಂತಿ ಪಸರಿಸುವ ಮೂಲಕ ಏಕತೆಯನ್ನು ಬೆಳೆಸಬೇಕು ಎಂದು ಮಂಗಳೂರಿನ ಕೆಥೋಲಿಕ್ ಶಿಕ್ಷಣ ಮಂಡ ಳಿಯ ಕಾರ್ಯದರ್ಶಿ ವಂ| ಆ್ಯಂಟನಿ ಸೆರಾ ಹೇಳಿದರು.
ಅವರು ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ನಲ್ಲಿ ಕ್ರಿಸ್ಮಸ್ ಆಚರಣೆಯ ಅಧ್ಯಕ್ಷತೆ ವಹಿಸಿದ್ದರು. ಕ್ರಿಸ್ಮಸ್ ಹಬ್ಬವು ಎಲ್ಲರಲ್ಲಿಯೂ ಶಾಂತಿ ಮತ್ತು ಪ್ರೀತಿ ತುಂಬಿದ ಹೃದಯವಂತಿಕೆಯನ್ನು ಬೆಳೆಸಲಿ ಎಂದು ಅವರು ಹಾರೈಸಿದರು.
ಪ್ರೀತಿ ತುಂಬಿದ ಹೃದಯವಿದ್ದರೆ, ಪ್ರೀತಿ ಪೂರ್ವಕ ಮುಗುಳ್ನಗೆ ಬೀರಲು ಸಾಧ್ಯ. ಎಲ್ಲರ ಹೃದಯಗಳಲ್ಲಿಯೂ ಪ್ರೀತಿ ಇದ್ದೇ ಇರುತ್ತದೆ. ಆದರೆ ಕೆಲವು ಅಡೆ ತಡೆ ಗಳು ಅದನ್ನು ಅದುಮಿಟ್ಟು ಹೊರ ಬಾರದಂತೆ ನೋಡಿ ಕೊಳ್ಳುತ್ತವೆ ಎಂದರು.
ಪ್ರೀತಿಯ ಹಂಚುವಿಕೆ ಕ್ರಿಸ್ಮಸ್ನ ಮೂಲತತ್ವ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ನ
ವ್ಯವಸ್ಥಾಪಕ ವಂ| ವಿಲ್ಸನ್ ವೈಟಸ್ ಡಿ’ಸೋಜಾ ಅವರು ಕ್ರಿಸ್ಮಸ್ನ ಮೂಲತತ್ವವು ಪರರ ಬಗೆಗಿನ ಕಾಳಜಿ ಹಾಗೂ ಪ್ರೀತಿಯ ಹಂಚುವಿಕೆಯಲ್ಲಿದೆ ಎಂದರು.
ಪ್ರಮಾಣ ಪತ್ರ ವಿತರಣೆ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ಜರಗಿದವು. ಕ್ರಿಸ್ಮಸ್ ಪ್ರಯುಕ್ತ ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲ ವಂ| ರೋಬರ್ಟ್ ಡಿ’ಸೋಜಾ, ಬಿಜೈ ಚರ್ಚಿನ ಸಹಾಯಕ ಧರ್ಮಗುರು ವಂ| ಪ್ರಮೋದ್ ಕ್ರಾಸ್ತಾ, ಉಪಪ್ರಾಂಶುಪಾಲೆ ಬೆಲಿಟಾ ಮಸ್ಕರೇನ್ಹಸ್, ಆಡಳಿತ ಮಂಡ ಳಿಯ ಸದಸ್ಯ ಸ್ಟ್ಯಾನಿ ವಾಸ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮೇರಿಸಾ ಸ್ವಾಗತಿಸಿ, ಸಮರ್ಥ ಮಣಿಪುರಿ ವಂದಿಸಿದರು.
ಆಡಿಸ್ ಡಿ’ಕೊಸ್ತಾ ಹಬ್ಬದ ಆಚರಣೆಯ ಮಹತ್ವ ವಿವರಿಸಿದರು. ಸಿಮ್ರಾನ್
ಇಗ್ನೇಟ್ಟೊ ಕಾರ್ಯಕ್ರಮ ನಿರೂಪಿ ಸಿದರು. ಶಿಕ್ಷಕಿಯರಾದ ತೆರೆಜಾ ಮೊಂತೆರೋ
ಮತ್ತು ಸೀಮಾ ಲೋಬೋ ಕಾರ್ಯಕ್ರಮ ಸಂಯೋಜಿಸಿ ದರು. ಸಂಗೀತಾ ಸಾಲಿನ್ಸ್, ಲೊಲಿಟಾ ಮಸ್ಕರೇನ್ಹಸ್, ವಿವಿಟಾ ಡಿ’ಸೋಜಾ, ಶಾಂತಿ ಮಿನೇಜಸ್ ಮತ್ತು ಐವನ್ ಮಸ್ಕರೇನ್ಹಸ್ ಸಹಕರಿಸಿದರು.