Home ಧಾರ್ಮಿಕ ಸುದ್ದಿ ಮಂಗಳೂರು ಧರ್ಮಪ್ರಾಂತ: ಪರಮ ಪ್ರಸಾದದ ಮೆರವಣಿಗೆ

ಮಂಗಳೂರು ಧರ್ಮಪ್ರಾಂತ: ಪರಮ ಪ್ರಸಾದದ ಮೆರವಣಿಗೆ

1239
0
SHARE

ಮಂಗಳೂರು: ಮಂಗಳೂರು ಧರ್ಮಪ್ರಾಂತದ ವಾರ್ಷಿಕ ಪರಮ ಪ್ರಸಾದ ಮೆರವಣಿಗೆ ರವಿವಾರ ಮಿಲಾಗ್ರಿಸ್‌ ಚರ್ಚ್‌ ನಿಂದ ರೊಜಾರಿಯೋ ಕೆಥೆಡ್ರಲ್‌ ತನಕ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ನಡೆಯಿತು.

ಅಪರಾಹ್ನ 3.30ಕ್ಕೆ ಮಿಲಾಗ್ರಿಸ್‌ ಚರ್ಚ್‌ ನಲ್ಲಿ ಬಲಿಪೂಜೆಯ ಬಳಿಕ ಮೆರವಣಿಗೆ ಆರಂಭಗೊಂಡಿತು. ಕೆಥೆಡ್ರಲ್‌ನಲ್ಲಿ ಪರಮ ಪ್ರಸಾದದ ಆರಾಧನೆಯನ್ನು ಮಂಗಳ ಜ್ಯೋತಿ ಸಂಸ್ಥೆಯ ನಿರ್ದೇಶಕ ಫಾ| ವಿಜಯ್‌ ಮಚಾದೊ ನಡೆಸಿಕೊಟ್ಟರು. ಬಿಕರ್ನಕಟ್ಟೆ ಬಾಲ ಯೇಸು ಪುಣ್ಯ ಕ್ಷೇತ್ರದ ನಿರ್ದೇಶಕ ಫಾ| ವಿಲ್ಫೆ†ಡ್‌ ರೊಡ್ರಿಗಸ್‌ ಬೈಬಲ್‌ ವಾಚಿಸಿ ಪ್ರವಚನ ನೀಡಿದರು.

ಫೆ. 2: ಕೆಥೋಲಿಕ್‌ ಮಹಾ ಸಮಾವೇಶ
ಯುವಜನ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಲಾಗುತ್ತಿದ್ದು, ಅದಕ್ಕೆ ಧರ್ಮ ಪ್ರಾಂತದ ವತಿಯಿಂದ 2 ಲಕ್ಷ ರೂ. ನೀಡಲಾಗುವುದು. ಪ್ರತಿಯೊಂದು ಚರ್ಚ್‌ನ ಐಸಿವೈಎಂ ಘಟಕವೂ ಈ ನಿಧಿಗೆ ಕೊಡುಗೆಯನ್ನು ನೀಡಬೇಕು ಎಂದು ಬಿಷಪ್‌ ಮನವಿ ಮಾಡಿದರು. ಫೆ. 2ರಂದು ಬೆಳ್ತಂಗಡಿಯಲ್ಲಿ ಕೆಥೋಲಿಕ್‌ ಕ್ರೈಸ್ತ ಮಹಾ ಸಮಾವೇಶ ನಡೆಯಲಿದೆ ಎಂದರು.

ಧರ್ಮಪ್ರಾಂತದ ಪ್ರಧಾನ ಗುರು ಮೊ| ಮ್ಯಾಕ್ಸಿಂ ಎಲ್‌. ನೊರೊನ್ಹಾ, ನಿವೃತ್ತ ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ, ಮೊ| ಡೆನಿಸ್‌ ಮೊರಾಸ್‌ ಪ್ರಭು, ಫಾ| ಮುಲ್ಲರ್‌ ಸಂಸ್ಥೆಯ ನಿರ್ದೇಶಕ ಫಾ| ರಿಚಾರ್ಡ್‌ ಕುವೆಲ್ಲೊ, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ರೊಜಾರಿಯೋ ಕೆಥೆಡ್ರಲ್‌ನ ರೆಕ್ಟರ್‌ ಫಾ| ಜೆ.ಬಿ. ಕ್ರಾಸ್ತಾ ಭಾಗವಹಿಸಿದ್ದರು.

ಮಾನವ ಜೀವವನ್ನು ಗೌರವಿಸುವ ವರ್ಷ
ಬಳಿಕ ನಡೆದ ಕಾರ್ಯಕ್ರಮದಲ್ಲಿ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಅವರು ಧರ್ಮಪ್ರಾಂತದ ವತಿಯಿಂದ 2019ರಲ್ಲಿ ನಡೆದ, ಯುವಜನರಿಗೆ ಸಮರ್ಪಿಸಿದ ವರ್ಷಾಚರಣೆಯ ಸಮಾರೋಪವನ್ನು ಮತ್ತು 2020ರಲ್ಲಿ ನಡೆಯಲಿರುವ ಮಾನವ ಜೀವಕ್ಕೆ ಗೌರವ ಕೊಡುವ ವರ್ಷಾಚರಣೆಯ ಪ್ರಾರಂಭೋತ್ಸವವನ್ನು ಘೋಷಿಸಿದರಲ್ಲದೆ, ಅದರ ಲಾಂಛನವನ್ನು ಅನಾವರಣ ಮಾಡಿದರು. ಐಸಿವೈಎಂ ಕೇಂದ್ರೀಯ ಸಮಿತಿ ಅಧ್ಯಕ್ಷ ಲಿಯೋನ್‌ ಸಲ್ಡಾನ್ಹಾ ಅವರು ಯುವಜನರಿಗೆ ಸಮರ್ಪಿಸಿದ ವರ್ಷದಲ್ಲಿ ಹಮ್ಮಿಕೊಂಡಿದ್ದ ವಿವಿಧ ಚಟುವಟಿಕೆಗಳನ್ನು ವಿವರಿಸಿದರು.

LEAVE A REPLY

Please enter your comment!
Please enter your name here