ಪಲಿಮಾರು ಪರ್ಯಾಯಕ್ಕೆ ದಿನಗಣನೆ►
ಈ ಪರ್ಯಾಯಕ್ಕೂ ಮಂಗಲಾಷ್ಟಕಕ್ಕೂ ಅವಿನಾಭಾವ ಸಂಬಂಧ…! ಮಂಗಲಾಷ್ಟಕಗಳೆಂದರೆ ಮಂಗಲಪ್ರದವಾದುದನ್ನು ಹಾರೈಸುವ ಅಷ್ಟಕಗಳು (ಎಂಟು ಸೊಲ್ಲು). ಕೇವಲ ಕರಾವಳಿಯಲ್ಲಿಮಾತ್ರವಲ್ಲದೆ ನಾಡಿನುದ್ದಕ್ಕೂ ಸಂಪ್ರದಾಯಭೇದವಿಲ್ಲದೆ ಜನಸಾಮಾನ್ಯರ ಕಾರ್ಯಕ್ರಮದಲ್ಲಿಯೂ ಎಲ್ಲರೂ ಪಠಿಸುವ ಮಂಗಲಾಷ್ಟಕ ಪಲಿಮಾರು ಮಠದ ಪರಂಪರೆಯಲ್ಲಿ ಬೆಳಗಿದ ಶ್ರೀ ರಾಜರಾಜೇಶ್ವರ ಯತಿ ವಿರಚಿತ ಮಂಗಲಾಷ್ಟಕ. ಮಾನವನ ಪ್ರತಿ ಆಗುಹೋಗುಗಳಿಗೆ ವೈಶ್ವಿಕ ವ್ಯವಸ್ಥೆಯ ಕೊಡುಗೆ/ ಪ್ರಭಾವ ಇದೆ. ದೇವರು, ದೇವತೆಗಳು ಮತ್ತು ರಾಜರ್ಷಿಗಳು, ಋಷಿಗಳು, ನಕ್ಷತ್ರ, ರಾಶಿ, ಸಂವತ್ಸರಗಳು, ವೇದೋಪನಿಷತ್ತೇ ಮೊದಲಾದವುಗಳೊಳಗೆ ಇರುವ ದೇವತೆಗಳು ಅನುಗ್ರಹ ಮಾಡುವ ಮೂಲಕ ನಮ್ಮನ್ನು ಹರಸಲು ರಾಜರಾಜೇಶ್ವರ ಯತಿಗಳು ಪ್ರಾರ್ಥಿಸಿದ್ದಾರೆ.